Viral Video: ಕಾರು ಬಿಟ್ಟು ಮೆಟ್ರೋ ಏರಿದ ಮದುಮಗಳು! ವೀಡಿಯೋ ವೈರಲ್‌!!!

Viral Video: ಮೆಟ್ರೋ ರೈಲು ಸೇವೆ ಇತ್ತೀಚೆಗೆ ಹಲವು ಸುದ್ದಿಗಳಿಂದ ಪ್ರಚಲಿತದಲ್ಲಿದೆ. ರೊಮ್ಯಾನ್ಸ್‌ ಮಾಡುವುದು, ಫೈಟ್‌ ಮಾಡುವುದು, ಡ್ಯಾನ್ಸ್‌ ಮಾಡುವುದು, ರೀಲ್ಸ್‌ ಮಾಡುವುದು ಇತ್ಯಾದಿ. ಇಂತಹ ಒಂದು ಘಟನೆಯ ಮಧ್ಯೆ ಕುತೂಹಲಕಾರಿ ಘಟನೆಯೊಂದು ನಡೆದಿದೆ. ಅಂತಹ ಒಂದು ವೀಡಿಯೋ ಇದೀಗ ವೈರಲ್‌ ಆಗಿದೆ. ಈ ವೀಡಿಯೋ ಯಾಕೆ ಇಷ್ಟೊಂದು ಸದ್ಸು ಮಾಡುತ್ತಿದೆ ಬನ್ನಿ ತಿಳಿಯೋಣ.

ಟ್ರಾಫಿಕ್‌ ಕಿರಿಕಿರಿ ಬೇಡ ಎನ್ನುವ ಮಂದಿ ಮೆಟ್ರೋಗೆ ಅವಲಂಬಿಸುವುದು ಸಾಮಾನ್ಯ. ಇದೇ ಕಿರಿಕಿರಿಯಿಂದ ಬೇಸತ್ತ ವಧುವೊಬ್ಬಳು ಮೆಟ್ರೋ ಏರಿ ಮದುವೆ ಮಂಟಪಕ್ಕೆ ತೆರಳಿದ ವೀಡಿಯೋವೊಂದು ವೈರಲ್‌ ಆಗಿದೆ. ಕಾರಿನಲ್ಲಿ ವಧು – ವರರು ಮದುವೆ ಮಂಟಪಕ್ಕೆ ಹೋಗುವುದು ಸಾಮಾನ್ಯ. ಆದರೆ ಬೆಂಗಳೂರಿನ ಟ್ರಾಫಿಕ್‌ ಕಿರಿಕಿರಿಗೆ ಬೇಸತ್ತ ವಧು, ಸುಲಭ ದಾರಿ ಹಿಡಿದಿದ್ದಾರೆ.

ಟ್ರಾಫಿಕ್‌ನಲ್ಲಿ ಸಿಲುಕಿದ ವಧು ಮದುವೆಯ ಶುಭ ಮುಹೂರ್ತ ಮೀರಿ ಹೋಗುವ ಚಿಂತೆಯಿಂದ ಈ ನಿರ್ಧಾರ ಮಾಡಿದ್ದಾರೆ. ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಮೆಟ್ರೋದಲ್ಲಿ ಸಂಚರಿಸುವ ವೀಡಿಯೋದಲ್ಲಿ ಕಂಡು ಬಂದಿದೆ.

 

Leave A Reply

Your email address will not be published.