Karwar: ಮಸೀದಿಯಲ್ಲಿ ನಡೆಯಿತು ಪವಾಡ; ಗ್ಯಾಸ್‌ ಸಂಪರ್ಕ ಇಲ್ಲದೆ ಉರಿದ ಸ್ಟವ್‌, ವಿಡಿಯೋ ವೈರಲ್‌!

Karwar: ಬೆಂಕಿ ಉರಿಯಲು ಗ್ಯಾಸ್‌ ಬೇಕು. ಇದು ಎಲ್ಲರಿಗೂ ಗೊತ್ತಿರು ವಿಷಯ. ಆದರೆ ಉತ್ತರ ಕನ್ನಡ, ಜಖಂಡಿಯ ಅಲ್ಗೂರು ಬಸ್ತಿಯ ಅಬು ಹನೀಫಾ ಮಸೀದಿಯಲ್ಲಿ ಒಂದು ಚಮತ್ಕಾರ ನಡೆದಿದೆ. ಗ್ಯಾಸ್‌ ಸಿಲಿಂಡರ್‌ ಸಂಪರ್ಕವಿಲ್ಲದೇ ಆರು ನಿಮಷಗಳ ಕಾಲ ಸ್ಟೌವ್‌ ಉರಿದಿದೆ ಎಂದು ವರದಿಯಾಗಿದೆ.

ಈ ದೃಶ್ಯವನ್ನು ದಾಂಡೇಲಿಯ ರಿಯಾಝ್‌ ಎಂಬುವವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಗ್ಯಾಸ್‌ನಿಂದ ಪೈಪ್‌ ಕಿತ್ತುಹಾಕಿರುವುದು ಸ್ಪಷ್ಟವಾಗಿ ಗೋಚರಿಸಿದೆ.

ದಾಂಡೇಲಿಯ ಜಮಾಅತ್‌ನಿಂದ ರಿಯಾಜ್, ಮೊಹಮ್ಮದ್ ಗೌಸ್ ಸೇರಿದಂತೆ ಹಲವರು ಧರ್ಮ ಪ್ರಚಾರದ ಹಿನ್ನೆಲೆ ಜಮಖಂಡಿಗೆ ತೆರಳಿದ್ದರು. ಈ ಸಂದರ್ಭ ಬುಧವಾರ ಮಸೀದಿಯಲ್ಲಿ ನಮಾಜ್‌ ಮಾಡುವ ಮೊದಲು ಚಹಾ ತಯಾರಿಸಲು ಗ್ಯಾಸ್‌ ಹಚ್ಚಿದ್ದಾರೆ. ಈ ಸಂದರ್ಭ ಸಿಲಿಂಡರ್‌ನಲ್ಲಿ ಗ್ಯಾಸ್‌ ಖಾಲಿ ಆಗಿರುವುದು ಗೊತ್ತಾಗಿದೆ. ಗ್ಯಾಸ್‌ ಬದಲಾಯಿಸಲು ರೆಗ್ಯುಲೇಟರ್‌ ರಿಮೂವ್‌ ಮಾಡಿದ್ದರು. ಆದರೆ ಯಾವುದರ ಸಂಪರ್ಕವಿಲ್ಲದೇ ಬೆಂಕಿ ಉರಿದಿದೆ.

ಚಹಾ ತಯಾರು ಮಾಡಿದ ನಂತರ ಸ್ಟವ್‌ ಬಂದ್‌ ಮಾಡಿದರೂ ಬೆಂಕಿ ಆರದೆ ಹಾಗೇ ಉರಿದಿದೆ. ನಂತರ ಬಾಯಿಂದ ಊದಿ ಬೆಂಕಿಯನ್ನು ಆರಿಸಿರುವ ಕುರಿತು ವರದಿಯಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಲವು ಮಂದಿ ಇದನ್ನು ಅಲ್ಲಾನ ಪವಾಡ ಎಂದಿದ್ದಾರೆ. ಇನ್ನು ಕೆಲವರು ಸ್ಟೌನ್‌ನಲ್ಲಿ ಗ್ಯಾಸ್‌ ಉಳಿದಿದೆ ಹೀಗಾಗಿ ಗ್ಯಾಸ್‌ ಸಂಪರ್ಕ ತೆಗೆದರೂ ಉರಿದಿದೆ ಎಂದು ಹೇಳಿದ್ದಾರೆ.

 

Leave A Reply

Your email address will not be published.