Crime News: ಬಿಸಿ ಬಿಸಿ ಮೀನು ಸಾರು ಒಲೆಯಲ್ಲಿ ಬೇಯುತ್ತಿತ್ತು, ಅಷ್ಟರಲ್ಲಿ ಅಣ್ಣ ತಮ್ಮನ ಮಧ್ಯೆ ನಡೆಯಿತು ಜಗಳ, ಮುಂದೇನಾಯ್ತು?

Share the Article

Satya Sai District: ಸಹೋದರರಿಬ್ಬರ ನಡುವೆ ಮೀನಿನ ಸಾರಿನ ವಿಷಯಕ್ಕೆ ಜಗಳ ಶುರು ಆಗಿ ಕೊನೆಗೆ ಅದು ಕೊಲೆಯಲ್ಲಿ ಅಂತ್ಯಗೊಂಡಿದೆ. ಬಿಸಿ ಬಿಸಿ ಮೀನಿನ ಸಾರು ಇನ್ನೇನು ಸಿದ್ಧವಾಗಬೇಕಿತ್ತು. ಆ ಇಬ್ಬರು ಸಹೋದರರು ಒಟ್ಟಿಗೆ ಕುಳಿತು ತಿನ್ನಲು ನಿರ್ಧಾರ ಮಾಡಿದ್ದರು.

ಆದರೆ ಈನು ಸಾರು ರೆಡಿಯಾಗುವ ಮೊದಲೇ ಅಣ್ಣನನ್ನು ಕಿರಿಯ ಸಹೋದರ ಕೊಂದು ಹಾಕಿದ್ದಾನೆ.

ಅಣ್ಣ ಸಂಜೀವನ ಹೆಂಡತಿ ತವರು ಮನೆಗೆ ಹೋಗಿದ್ದಳು. ಹಾಗಾಗಿ ಅಣ್ಣ ಮಾರುಕಟ್ಟೆಗೆ ಹೋಗಿ ಮೀನು ತಗೊಂಡು ಬಂದಿದ್ದಾನೆ.

Menstruation: ಮುಟ್ಟು ಇದುವೇ ಹುಟ್ಟಿನ ಗುಟ್ಟು : ಹೆಣ್ಣು ಮಕ್ಕಳ ಮೊದಲ ಋತುಚಕ್ರ ಆದಾಗ ಅವರಲ್ಲಾಗುವ ಬದಲಾವಣೆಗಳೇನು ?…

ನಂತರ ಮನೆಗೆ ಬಂದು ಕಿರಿಯ ಸಹೋದರ ವೆಂಕಟೇಶನ ಹೆಂಡತಿಗೆ ಮೀನಿನ ಸಾರು ಬೇಯಿಸಲು ಹೇಳಿದ್ದಾನೆ. ಈ ಮಧ್ಯೆ ಸಹೋದರರಿಬ್ಬರು ಫುಲ್‌ ಟೈಟ್‌ ಆಗಿದ್ದು, ಇಬ್ಬರ ನಡುವೆ ಮೀನಿನ ಸಾರು ಬೇಯಿಸುವ ವಿಚಾರದಲ್ಲಿ ಗಲಾಟೆ ಶುರುವಾಗಿದೆ. ಮೀನಿನ ಸಾರು ಬೇಗ ಮಾಡಲು ಮಸಾಲೆ ರೆಡಿಮಾಡು ಎಂದು ಅಣ್ಣ ತಮ್ಮನಿಗೆ ಹೇಳ್ತಾ ಇದ್ದ.

Summer Care: ಮಹಿಳೆಯರೇ, ಬೇಸಿಗೆಯಲ್ಲಿ ಒಳ ಉಡುಪುಗಳ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ; ಕಾರಣ ಇಲ್ಲಿದೆ

ಮಲಗಿದ್ದ ವೆಂಕಟೇಶನಿಗೆ ಅಣ್ಣ ಪದೇ ಪದೇ ಕೀಟಲೆ ಮಾಡಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳವಾಗಿದೆ. ಇತ್ತ ತಮ್ಮನ ಹೆಂಡತಿ ಮಸಾಲೆ ಎಲ್ಲ ರೆಡಿ ಮಾಡಿ ಮೀನಿನ ಸಾರು ಬೇಯಿಸಲು ರೆಡಿ ಮಾಡಿದ್ದಾಳೆ.

ಆದರೆ ಅಷ್ಟರಲ್ಲಿ ಕಿರಿಯ ಸಹೋದರ ವೆಂಕಟೇಶ್‌ ಕುಡಿದ ಮತ್ತಿನಲ್ಲಿ ದೊಣ್ಣೆ ತಂದು ಅಣ್ಣ ಸಂಜೀವನ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಸಂಜೀವ್‌ ಸ್ಥಳದಲ್ಲೇ ಸಾವಾಗಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Leave A Reply