Himba Tribe People: ಈ ಊರಲ್ಲಿ ಮನೆಗೆ ಅತಿಥಿ ಬಂದರೆ ಯಜಮಾನನ ಪತ್ನಿ ಆತನ ಜೊತೆಗೆ ರಾತ್ರಿ ಕಳೆಯಬೇಕು!!

Tribe people: ದೇಶದಲ್ಲಿ ಅನೇಕ ರೀತಿಯ ಸಮುದಾಯದ ಜನರು ನೆಲೆಸಿದ್ದು, ಪ್ರತಿಯೊಂದು ಜನಾಂಗದ ಸಂಪ್ರದಾಯ ವಿಭಿನ್ನವಾಗಿದೆ.ಇಂದಿಗೂ ಕೆಲವು ಜನಾಂಗದ ಸಂಸ್ಕೃತಿಗಳು ಜನರನ್ನು ಅಚ್ಚರಿಗೆ ತಳ್ಳುತ್ತವೆ.ಅದರಲ್ಲಿ ಈ ಹಿಂಬಾ ಬುಡಕಟ್ಟಿನ(Himba Tribe people) ಸಂಪ್ರದಾಯ ಕೂಡ ಒಂದಾಗಿದ್ದು, ಇವರು ತಮ್ಮ ಸಾಂಪ್ರದಾಯಿಕ ಉಡುಗೆ ಮತ್ತು ಪದ್ಧತಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸುತ್ತಿದ್ದಾರಂತೆ.

 

ನಮೀಬಿಯಾದಲ್ಲಿ ಹಿಂಬಾ ಎಂಬ ಬುಡಕಟ್ಟು (Tribe people)ಇದ್ದು,ಇಂದಿಗೂ ಈ ಬುಡಕಟ್ಟು ಜನಾಂಗದವರು ಕೆಲವು ನಿಯಮಗಳನ್ನು ಅನುಸರಿಸುತ್ತಾರಂತೆ. ಈ ಬುಡಕಟ್ಟಿನ ನಿಯಮಗಳ ಅನುಸಾರ, ಇಲ್ಲಿ ಸ್ನಾನ ಮಾಡುವುದನ್ನು ನಿಷೇಧ ಹೇರಲಾಗಿದೆ. ಈ ದೇಶದಲ್ಲಿ ಹೆಣ್ಣಿನ ಮದುವೆಯನ್ನು ಆಕೆಯ ತಂದೆ ನಿರ್ಧಾರ ಮಾಡುತ್ತಾರಂತೆ. ಇಲ್ಲಿ ಮದುವೆಯ ಬಳಿಕ ಹೆಚ್ಚು ವಿಚಿತ್ರ ಆಚರಣೆಗಳನ್ನು ಅನುಸರಿಸಬೇಕಂತೆ.

 

ಮನೆಗೆ ಅತಿಥಿ ಬಂದರೆ ಮತ್ತು ಮನೆಯ ಯಜಮಾನ ಅವನನ್ನು ಮನೆಯಲ್ಲಿ ಉಳಿಯಲು ಅನುಮತಿ ನೀಡಿದರೆ ಹೆಂಡತಿ ರಾತ್ರಿಯಲ್ಲಿ ಅತಿಥಿಯೊಂದಿಗೆ ಇರಬೇಕಂತೆ. ಇದು ಹಿಂಬಾ ಜನರ ಪ್ರಾಚೀನ ಸಂಸ್ಕೃತಿಯ ಭಾಗವಾಗಿದೆ. ಆದರೆ ಇಲ್ಲಿ ಮಹಿಳೆ ಅತಿಥಿಯನ್ನು ಭೇಟಿಯಾಗಲು ಒಪ್ಪಿಕೊಳ್ಳದೆ ಇರಬಹುದು. ಇಲ್ಲವೇ ಆಕೆ ದೈಹಿಕ ಸಂಪರ್ಕ ಇಲ್ಲದೆ ಇದ್ದರೂ ಕೂಡ ಆ ರಾತ್ರಿಯನ್ನು ಅತಿಥಿ ಕೋಣೆಯಲ್ಲಿಯೇ ಕಳೆಯಬೇಕಂತೆ. ಪ್ರಸ್ತುತ ಈ ಬುಡಕಟ್ಟಿನವರು ಸುಮಾರು 50 ಸಾವಿರ ಜನರು ಮಾತ್ರ ಇದ್ದಾರಂತೆ. ಒಟ್ಟಿನಲ್ಲಿ ಇಲ್ಲಿನ ಸಂಪ್ರದಾಯ ನೋಡುಗರಿಗೆ ವಿಚಿತ್ರ ಎನಿಸದೆ ಇರದು.

Leave A Reply

Your email address will not be published.