Actor Darshan:ದರ್ಶನ್‌ ಜೊತೆಗಿನ ʼರಿಲೇಷನ್‌ಶಿಪ್‌ಗೆ ಹತ್ತು ವರ್ಷʼ ಎಂದು ಪೋಸ್ಟ್‌ ಮಾಡಿದ ಪವಿತ್ರ ಗೌಡ! ದರ್ಶನ್‌ ಪತ್ನಿ ಗರಂ!!!

ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಪವಿತ್ರ ಗೌಡ ವಿರುದ್ಧ ಆಕ್ರೋಶಗೊಂಡಿದ್ದಾರೆ. ದರ್ಶನ್‌ ಜೊತೆಗಿರುವ ಫೋಟೋವನ್ನು ಪವಿತ್ರ ಗೌಡ ಇನ್‌ಸ್ಟಾಗ್ರಾಂ ನಲ್ಲಿ ಶೇರ್‌ ಮಾಡಿ, ರಿಲೇಷನ್‌ಶಿಪ್‌ಗೆ ಹತ್ತು ವರ್ಷ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

 

ವಿಜಯಲಕ್ಷ್ಮೀ ಅವರು ಈ ಕುರಿತು ಆಕ್ರೋಶಗೊಂಡಿದ್ದಾರೆ.

ಈ ಹಿಂದೆ ವಿಜಯಲಕ್ಷ್ಮೀ ಅವರು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಟಾಂಟ್‌ ನೀಡುವ ಕೆಲಸ ಮಾಡಿದ್ದರು. ಇದೀಗ ನೇರವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಪವಿತ್ರ ಗೌಡ ಅವರು ಈ ವರ್ತನೆಗೆ ವಿಜಯಲಕ್ಷ್ಮೀ ಅವರು ನೇರವಾಗಿ ತಮ್ಮ ಮಾತನ್ನು ಹೇಳಿದ್ದಾರೆ. ಪವಿತ್ರ ಗೌಡ ಅವರು ದರ್ಶನ್‌ ಅವರು ಆತ್ಮೀಯ ಫೋಟೋಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿ ವಿಡಿಯೋ ಮಾಡಿ ನಮ್ಮ ಈ ರಿಲೇಷನ್‌ಶಿಪ್‌ಗೆ ಹತ್ತು ವರ್ಷ ಎಂದು ಬರೆದಿದ್ದಾರೆ.

ಬೇರೆಯವರ ಗಂಡನ ಜೊತೆ ಯಾಕೆ ಫೋಟೋ ಶೇರ್‌ ಮಾಡುತ್ತಿದ್ದಾರೆ ಎಂಬ ಪ್ರಶ್ನೆಯನ್ನು ವಿಜಯಲಕ್ಷ್ಮೀ ಕೇಳಿದ್ದು, ಇದರ ವಿರುದ್ಧ ನಾನು ಕಾನೂನು ಹೋರಾಟವನ್ನು ಕೂಡಾ ಮಾಡುತ್ತೇನೆ ಎಂದು ಹೇಳಿದ್ದಾರೆ.

ಆ ಪೋಸ್ಟ್‌ನಲ್ಲಿ ವಿಜಯಲಕ್ಷ್ಮೀ ಅವರ ಸಾಕಷ್ಟು ಫೋಟೋಸ್‌ ಗಳನ್ನು ಹಾಕಿದ್ದಾರೆ. ಪವಿತ್ರ ಗೌಡ ಅವರು ತಮ್ಮ ಗಂಡನ ಜೊತೆ ಇರುವ ವೀಡಿಯೋಗಳನ್ನು ವಿಜಯಲಕ್ಷ್ಮೀ ಅವರು ಹಾಕಿ ಟ್ಯಾಗ್‌ ಮಾಡಿದ್ದಾರೆ. ಪವಿತ್ರ ಗೌಡ ಅವರ ಮಗಳು ಖುಷಿ ಗೌಡ, ಸಂಜಯ್‌ ಸಿಂಗ್‌ (ಪವಿತ್ರ ಗಂಡ) ಅವರನ್ನು ಟ್ಯಾಗ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದಾರೆ.

ಮುಂದಿನ ಹಂತದಲ್ಲಿ ಇದು ಯಾವ ರೂಪಕ್ಕೆ ತಿರುಗುತ್ತದೆ ಎಂಬುವುದನ್ನು ಕಾದು ನೋಡಬೇಕು.

https://www.instagram.com/reel/C2fhWmdP6Nj/?utm_source=ig_web_copy_link&igsh=NTYzOWQzNmJjMA==

Leave A Reply

Your email address will not be published.