ದ.ಕ. : ಖಾಝಿಯವರ ಸಮ್ಮುಖದಲ್ಲೇ ಮಸೀದಿಯ ಮಹಾಸಭೆಯಲ್ಲಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ -19 ಜನರ ವಿರುದ್ಧ ಪ್ರಕರಣ ದಾಖಲು

ಮಂಗಳೂರು : ನೆಲ್ಯಾಡಿಯ ಬದ್ರಿಯಾ ಜುಮಾ ಮಸೀದಿಯ ಮಹಾಸಭೆಯಲ್ಲಿ ಖಾಝಿಯವರ ಸಮ್ಮುಖದಲ್ಲೇ ಎರಡು ಗುಂಪುಗಳ ನಡುವೆ ಪರಸ್ಪರ ಹೊಡೆದಾಟ ನಡೆದ ಬಗ್ಗೆ ವರದಿಯಾಗಿದೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸಂಬಂಧಿಸಿ ಇತ್ತಂಡದ 10 ಮಂದಿ ಮಂಗಳೂರು ಹಾಗೂ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು 19 ಮಂದಿಯ ವಿರುದ್ಧ ಕೇಸು ದಾಖಲಾಗಿದೆ.

ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹನೀಫ್ ಎಂಬವರು ನೀಡಿದ ದೂರಿನ ಮೇರೆಗೆ ಬಜತ್ತೂರು ಗ್ರಾಮದ ನೀರಕಟ್ಟೆ ನಿವಾಸಿ ದಿ. ಅಬೂಬಕ್ಕರ್ ಎಂಬವರ ಮಕ್ಕಳಾದ ಉಸ್ಮಾನ್ ಚೌಹರಿ ನೀರಕಟ್ಟೆ, ಇಬ್ರಾಹಿಂ ಮದನಿ ಉಳ್ಳಾಲ, ಅಬ್ದುಲ್ ರಹಿಮಾನ್ ಎಸ್.ಎಂ., ಮುಹಮ್ಮದ್ ಮುಸ್ತಾಫ್, ಉಮ್ಮರ್ ಫಾರೂಕ್, ಮಹಮ್ಮದ್ ಹನೀಫ್, ಶಫೀಖ್ ಅಕ್ಸನಿ, ಇರ್ಷಾದ್ ಎಂಬವರ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಠಾಣಾ ಅ.ಕ್ರ: 13/2024 ಕಲಂ: 143,147,148,323,324,504,506, 3 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜತ್ತೂರು ಗ್ರಾಮದ ನೀರಕಟ್ಟೆ ದಿ.ಅಬೂಬಕ್ಕರ್‌ರವರ ಪುತ್ರ ಎಮ್.ಉಸ್ಮಾನ್ ಅವರು ನೀಡಿದ ದೂರಿನಂತೆ ಸಿದ್ದೀಕ್, ಟಿಪ್ಪುಸುಲ್ತಾನ್, ನಾಸೀ‌ರ್, ಸಾಕೀರ್, ಸಿದ್ದೀಕ್, ಸುಲೈಮಾನ್, ಹನೀಫ್, ರಫೀಕ್, ರಫೀಕ್ ಆಲಂಪಾಡಿ, ಖಲೀಲ್‌, ಶಕೀಲ್‌ ಎಂಬವರ ವಿರುದ್ದ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಠಾಣಾ ಅ.ಕ್ರ: 13/2024 ಕಲಂ: 143,147,148,323,324,504,506, 3 149 ಐಪಿಸಿಯಂತೆ ಕೇಸು ದಾಖಲಾಗಿದೆ.

ಘಟನೆಯಲ್ಲಿ ಗಾಯಗೊಂಡಿರುವ ಯೂಸುಫ್ ಶಾಂತಿಬೆಟ್ಟು, ಶಾಕೀರ್, ಸುಲೈಮಾನ್‌ರವರು ಮಂಗಳೂರಿನ ಐಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಇನ್ನೊಂದು ತಂಡದ ಮಹಮ್ಮದ್ ಮುಸ್ತಾಫ್, ಇರ್ಷಾದ್, ಮಹಮ್ಮದ್ ಸಪೀಕ್‌, ಮಹಮ್ಮದ್ ಹನೀಫ್, ಎಮ್ ಉಸ್ಮಾನ್, ಉಮ್ಮರ್ ಫಾರೂಕ್‌ರವರು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಹಾಗೂ ಮಹಮ್ಮದ್ ಹನೀಫ್ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.