Crude Oil: ಇಂಧನ ದರ ಕಡಿತ ಕೇಂದ್ರದಿಂದ ಶೀಘ್ರ ಘೋಷಣೆ!

Crude Oil: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ (Crude oil price)ಬ್ಯಾರಲ್‌ಗೆ 80 ಡಾಲರ್ (6650 ರು.) ಗಿಂತ ಇಳಿಕೆ ಕಂಡಿದೆ. ಹೀಗಾಗಿ, ಕೇಂದ್ರ ಸರ್ಕಾರ(Central Government)ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಬಹುದು ಎಂಬ ನಂಬಿಕೆ ಪುಷ್ಟೀಕರಿಸಲು ಕಾರಣವಾಗಿದೆ.

ಇದನ್ನೂ ಓದಿ: Udyogini Scheme:ಮಹಿಳೆಯರಿಗಾಗಿ ಕೇಂದ್ರದಿಂದ ಹೊಸ ಸ್ಕೀಮ್; ಈ ಯೋಜನೆಯಲ್ಲಿ ಸಿಗಲಿದೆ ಬಡ್ಡಿ ರಹಿತ ಸಾಲ!!

ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಗೂ (Lok sabha constituency)ಮೊದಲೇ ತೈಲ ದರ ಇಳಿಸುವ ಮುಖಾಂತರ ಜನಸಾಮಾನ್ಯರ ಮನವೊಲಿಸುವ ತಂತ್ರ ಬಳಸಲು ಮುಂದಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಶೀಘ್ರವೇ ಸರ್ಕಾರ ತೈಲ ದರ ಇಳಿಕೆಗೆ ಮುಂದಾಗಬಹುದು ಎಂದು ವರದಿಗಳು ತಿಳಿಸಿವೆ. ಜಾಗತಿಕ ಬೆಳವಣಿಗೆಗಳ(international market)ಪರಿಣಾಮ ಕಚ್ಚಾತೈಲ ಬೇಡಿಕೆ ಇಳಿಕೆ ಕಂಡ ಹಿನ್ನೆಲೆ ತೈಲ ದರವೂ ಕುಸಿತ ಕಂಡಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳೀಗ ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ 11 ರು. ಮತ್ತು ಡೀಸೆಲ್ ಮೇಲೆ 6 ರು.ನಷ್ಟು ಭರ್ಜರಿ ಲಾಭ ಗಳಿಸುತ್ತಿದೆ.

Leave A Reply

Your email address will not be published.