Hijab: ಈ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು; ಮುಸ್ಲಿಂ ಮುಖಂಡನ ಅಚ್ಚರಿಯ ಹೇಳಿಕೆ!!
Hijab: ಅಸ್ಸಾಂನ ರಾಜಕೀಯ ಪಕ್ಷ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ (Badruddin Azmal)ಮುಸ್ಲಿಂ ಸಮುದಾಯದ ಐಎಎಸ್ ಅಧಿಕಾರಿಗಳು(Indian Muslims), ಐಪಿಎಸ್ ಅಧಿಕಾರಿಗಳು ಮತ್ತು ವೈದ್ಯ ಮಹಿಳೆಯರು ಕಡ್ಡಾಯವಾಗಿ ಹಿಜಾಬ್(Hijab)ಧರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Gruhalakshmi : ಗೃಹಲಕ್ಷ್ಮೀಯರಿಗೆ ಬಂತು ಹೊಸ ರೂಲ್ಸ್- ಇನ್ಮುಂದೆ 2,000 ಬೇಕಂದ್ರೆ ಈ ಕೆಲಸ ಕಡ್ಡಾಯ !!
ಅಸ್ಸಾಂನ ಕರೀಂಗಂಜ್‌ನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಭಾಗಿಯಾಗಿದ್ದ ಸಂದರ್ಭ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಅಜ್ಮಲ್, ‘ಐಎಎಸ್, ಐಪಿಎಸ್ ಮತ್ತು ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಮುಸ್ಲಿಂ ಮಹಿಳೆಯರು(Muslim womans)ಹಿಜಾಬ್ ಧರಿಸಬೇಕು.
ಮುಸ್ಲಿಮ್ ಮಹಿಳೆಯರಿಗೆ(Muslim Community) ಹಿಜಾಬ್ ಧರಿಸುವುದು ಇಲ್ಲವೇ ಕೂದಲನ್ನು ಮುಚ್ಚುವುದು ಹೇಗೆ ಎಂದು ತಿಳಿದುಕೊಳ್ಳದಿದ್ದರೆ ಅವರು ಮುಸ್ಲಿಮರೆಂದು ಹೇಗೆ ಗುರುತಿಸಲ್ಪಡುತ್ತಾರೆ’ ಎಂದು ಪ್ರಶ್ನೆ ಮಾಡಿದ್ದಾರೆ. ಅಸ್ಸಾಂ ರಾಜ್ಯದ ಮುಸ್ಲಿಂ ಮಹಿಳೆಯರು ಹೆಚ್ಚಿನ ಮಂದಿ ಹಿಜಾಬ್ ಧರಿಸಲ್ಲ. ಹೀಗಾಗಿ ಇಲ್ಲಿನ ಹುಡುಗಿಯರು ಹಿಜಾಬ್ ಧರಿಸುವುದು ಅವಶ್ಯಕವಾಗಿದ್ದು, ಮುಸ್ಲಿಂ ಮಹಿಳೆಯರು ತಲೆಗೂದಲನ್ನು ಮರೆಮಾಡಿ ಹಿಜಾಬ್ ಧರಿಸುವುದು ನಮ್ಮ ಧರ್ಮದಲ್ಲಿದೆ ಎಂದಿದ್ದಾರೆ.