G. Parameshwara: ನಿರುದ್ಯೋಗಿ ಯುವಕರಿಗೆ ಇನ್ನೊಂದು ಸಿಹಿ ಸುದ್ದಿ ನೀಡಿದ ರಾಜ್ಯ ಸರಕಾರ!!!

G Parameshwara: ಗೃಹ ಸಚಿವ ಜಿ ಪರಮೇಶ್ವರ್‌ (G Parameshwara) ಅವರು ಇಂದು ನಿರುದ್ಯೋಗಿ ಯುವಕರಿಗೆ (unemployed youth) ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

 

545 ಪಿಎಸ್‌ಐ ನೇಮಕಾರಿ (PSI Recruitment) ಮರುಪರೀಕ್ಷೆ ಯಾವುದೇ ಅಕ್ರಮವಿಲ್ಲದೇ ಸುಗಮವಾಗಿ ನಡೆದಿದೆ, 54,000 ಯುವ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಸುಮಾರು 70% ಹಾಜರಾತಿ ಪ್ರಮಾಣ ಇತ್ತು ಎಂದು ಹೇಳಿದರು. ಈ 545 ಪಿಎಸ್ಐ ಹುದ್ದೆಗಳಲ್ಲದೆ, ಇನ್ನೂ 404 ಪಿಎಸ್ಐಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಸಲಾಗಿದ್ದು, ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಸಚಿವ ಹೇಳಿದ್ದಾರೆ. 660 ಪಿಎಸ್‌ಐಗಳ ನೇಮಕಾತಿಗಾಗಿ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿ ಶೀಘ್ರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕಿ ಎಸ್‌ ರಮ್ಯ ಅವರಿಗೆ ಪರೀಕ್ಷೆಯನ್ನು ಸುಲಲಿತವಾಗಿ ನಡೆಸಿಕೊಟ್ಟದ್ದಕ್ಕೆ ಅಭಿನಂದಿಸಿದ್ದಾರೆ.

Leave A Reply

Your email address will not be published.