Bihar: BJP ಜತೆ ಮತ್ತೆ ನಿತೀಶ್ ಕುಮಾರ್ ಮೈತ್ರಿ? ಏಕಾಏಕಿ ರಾಜ್ಯಪಾಲರ ಬೇಟಿಯಾದ ಸಿಎಂ!! ಬಿಹಾರ ರಾಜಕೀಯದಲ್ಲಿ ಮಹಾನ್ ಸಂಚಲನ!!

Bihar: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nithish kumar) ಏಕಾಏಕಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾಗಿದ್ದು ಗೌಪ್ಯ ಮಾತುಕತೆ ನಡೆಸಿದ್ದಾರೆ. ಇದರಿಂದ ಬಿಹಾರ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದ್ದು ನೀತೀಶ್ ಕುಮಾರ್ ಮರಳಿ ಬಿಜೆಪಿ ನೇತೃತ್ವದ NDA ಮೈತ್ರಿ ಕೂಟ ಸೇರುತ್ತಾರೆ ಎಂಬ ಸುದ್ದಿ ಸದ್ದುಮಾಡಲು ಶುರುಮಾಡಿದೆ.

ಹೌದು, ಭಾರತದ ನಡುಗೋ ಚಳಿಯಲ್ಲೂ ಬಿಹಾರ(Bihar) ರಾಜಕೀಯ ತಾಪಮಾನವನ್ನು ಏರಿಸಿದೆ. ಕಾರಣ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ರಾಜಭವನಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿ ರಾಜ್ಯಪಾಲರನ್ನು ಭೇಟಿಯಾದರು. ಅಚ್ಚರಿ ಏನಂದರೆ ಈ ವೇಳೆ ಸಂಪುಟ ಸಚಿವ ಹಾಗೂ ಜೆಡಿಯು ನಾಯಕ ವಿಜಯ್ ಚೌಧರಿ ಸಹ ಉಪಸ್ಥಿತರಿದ್ದರು. ಇದರಿಂದ ಮರಳಿ NDA ಜೊತೆ ಮರು ಮೈತ್ರಿ ಹಾದಿಯಲ್ಲಿ ನಿತೀಶ್ ಕುಮಾರ್ ಮುನ್ನಡೆಯುತ್ತಾರೋ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: Parliment election 2024: ಲೋಕಸಭಾ ಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ !!

ಅಂದಹಾಗೆ ಕೆಲ ದಿನಗಳ ಹಿಂದೆ ಆರ್‌ಜೆಡಿ(RJD) ನಾಯಕರಾದ ಲಾಲು ಪ್ರಸಾದ್‌ ಯಾದವ್‌, ತೇಜಸ್ವಿ ಯಾದವ್‌ ಜತೆಗೆ ನಿತೀಶ್‌ ಕುಮಾರ್‌ಗೆ ಮತ್ತೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿತ್ತು. ಇದರ ಹೊರತಾಗಿಯೂ ತೇಜಸ್ವಿ ಮತ್ತು ನಿತೀಶ್‌ ನಡುವೆ ಶುಕ್ರವಾರ ರಾತ್ರಿ ರಹಸ್ಯ ಮಾತುಕತೆಗಳು ನಡೆತ್ತು. ಮತ್ತೂಂದೆಡೆ, ಬಿಹಾರ ಬಿಜೆಪಿ ಘಟಕದ ಹಿರಿಯ ನಾಯಕ ವಿಜಯ ಕುಮಾರ್‌ ಸಿನ್ಹಾ ನಿವಾಸದಲ್ಲಿಯೂ ಸರಣಿ ಸಭೆಗಳು ನಡೆದಿದ್ದವು. ಹೀಗಾಗಿ ಎನ್‌ಡಿಎಗೆ ನಿತೀಶ್‌ರನ್ನು ಮತ್ತೆ ಸೇರ್ಪಡೆಗೊಳಿಸಲು ವೇದಿಕೆ ಸಿದ್ಧವಾಗಿದೆ ಎನ್ನಲಾಗಿದೆ. ಅಲ್ಲದೆ ನಿನ್ನೆ ದಿನ ನಿತೀಶ್ ಅವರು ದಿಢೀರ್ ಎಂದು ರಾಜ್ಯಪಾಲರ ಬೇಟಿ ಮಾಡಿದ್ದು ಇದಕ್ಕೆ ಇನ್ನೂ ಹೆಚ್ಚು ಅನುಮಾನ ಮೂಡಿಸಿದೆ.

ಇದನ್ನೂ ಓದಿ:  Children heart attack Symptoms: ಪೋಷಕರೇ ಎಚ್ಚರ – ಮಕ್ಕಳಗೆ ಹೃದಯಾಘಾತ ಆಗೋದಾದ್ರೆ ಈ ಲಕ್ಷಣಗಳು ಕಂಡುಬರುತ್ತೆ.

ಮುನಿಸೇಕೆ?

ಇಂಡಿಯಾ’ದ ಸಂಚಾಲಕ ಹುದ್ದೆಗೆ ಆರ್‌ಜೆಡಿ ತಮ್ಮನ್ನು ಬೆಂಬಲಿಸಲಿಲ್ಲ ಎಂಬ ಸಿಟ್ಟು ನಿತೀಶ್‌ಗೆ ಬಹುವಾಗಿ ಕಾಡುತ್ತಿದೆ. ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆರ್‌ಜೆಡಿ ಹೆಚ್ಚಿನ ಸ್ಥಾನಗಳನ್ನು ಕೇಳುತ್ತಿದೆ ಎಂಬ ವಿಚಾರವೂ ನಿತೀಶ್‌ರನ್ನು ಕಂಗೆಡಿಸಿದೆ. ಕಳೆದ ಚುನಾವಣೆಯಲ್ಲಿ ಆರ್‌ಜೆಡಿ ಒಂದೇ ಒಂದು ಕ್ಷೇತ್ರಗಳಲ್ಲಿ ಗೆಲ್ಲದಿದ್ದರೂ, ಹೆಚ್ಚಿನ ಸೀಟುಗಳನ್ನು ಕೇಳುತ್ತಿರುವುದು ಈ ಮುಸುಕಿನ ಗುದ್ದಾಟಕ್ಕೆ ಕಾರಣ ಎನ್ನಲಾಗಿದೆ.

Leave A Reply

Your email address will not be published.