Pejavara shri: ಪ್ರಧಾನಿ ಮೋದಿ ರಾಮನ ಪ್ರಾಣ ಪ್ರತಿಷ್ಠೆ ಮಾಡುವಾಗ ಮುಖ ಮುಚ್ಚಿಕೊಂಡ ಪೇಜಾವರ ಶ್ರೀ – ಯಾಕಾಗಿಯಂತೆ ಗೊತ್ತಾ?!

Pejavara shri: ನಿನ್ನೆ ದಿನ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಭುವಿನ ಪ್ರಾಣ ಪ್ರತಿಷ್ಠೆ ನೆರವೇರಿದೆ. ಕೋಟ್ಯಾಂತರ ಹಿಂದೂಗಳ ಕನಸನ್ನು ಪ್ರಧಾನಿ ಮೋದಿಯವರು ನೆರವೇರಿಸಿದ್ದು, ಶ್ರೀರಾಮ ಪ್ರಭು ಅಯೋಧ್ಯಾ ಅಧಿಪತಿಯಾಗಿ ನೆಲೆ ನಿಂತಿದ್ದಾನೆ. ಈ ಪ್ರಾಣ ಪ್ರತಿಷ್ಠೆ ವೇಳೆ ಗರ್ಭಗುಡಿಯೊಳಗೆ ಉಡುಪಿಯ(Udupi) ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಮುಖ ಮುಚ್ಚಿಕೊಂಡು ನಿಂತಿದ್ದರು. ಇದು ಎಲ್ಲರಿಗೂ ಅಚ್ಚರಿ ಉಂಟುಮಾಡಿತ್ತು. ಸದ್ಯ ಇದೀಗ ಶ್ರೀಗಳು ಇದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.

Pejavara shri

ಹೌದು, ಪ್ರಧಾನಿ ಮೋದಿಯವರು ಅಯೋಧ್ಯೆಯ ರಾಮ ಮಂದಿರದೊಳಗೆ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಿಸುವ ಸಂದರ್ಭದಲ್ಲಿ ಕೆಲವರಿಗಷ್ಟೆ ಒಳಗಡೆ ಅವಕಾಶ ನೀಡಲಾಗಿತ್ತು. ಇದರಲ್ಲಿ ಮಂದಿರ ಟ್ರಸ್ಟ್ ನ ಸದಸ್ಯರಾದ ಪೇಜಾವರ ಶ್ರೀಗಳು ಕೂಡ ಒಬ್ಬರಿದ್ದರು. ಪ್ರಧಾನಿಯವರು ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಿಸಿ, ಪ್ರಭುವಿಗೆ ನೈವೇದ್ಯ ನೀಡುವಾಗ ಪಕ್ಕದಲ್ಲೇ ಇದ್ದ ಪೇಜಾವರ ಶ್ರೀಗಳು(Pejavara shri) ತಕ್ಷಣ ತಮ್ಮ ಮುಸುಕಿಂದ ತಮ್ಮ ಮುಖವನ್ನು ಮುಚ್ಚಿಕೊಂಡು ಕೆಲ ಸಮತ ಹಾಗೇ ನಿಲ್ಲುತ್ತಾರೆ. ಇದು ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು ಭಾರೀ ಅಚ್ಚರಿ ಮೂಡಿಸಿದೆ. ಇದೀಗ ತಾವೇಕೆ ಹೀಗೆ ಮಾಡಿದ್ದೆಂದು ಶ್ರೀಗಳೇ ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನೂ ಓದಿ: IRCTC Package: ರಾಮ ಭಕ್ತರಿಗೆ ಗುಡ್ ನ್ಯೂಸ್! ಅಯೋಧ್ಯೆಗೆ IRCTC ಟೂರ್ ಪ್ಯಾಕೇಜ್

ಖಾಸಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು ನಮ್ಮ ಸಂಸ್ಕೃತಿ, ಆಚರಣೆ, ಪದ್ಧತಿ ಪ್ರಕಾರ ದೇವರಿಗೆ ನೈವೇದ್ಯ ನೀಡುವಾಗ, ಅರ್ಪಿಸುವಾಗ ಯಾರೂ ಕೂಡ ಅದನ್ನು ನೋಡಬಾರದು. ದೇವರು ನೈವೇದ್ಯವನ್ನು ಸ್ವೀಕರಿಸುತ್ತಾರೆ ಎಂಬುದು ನಮ್ಮ ನಂಬಿಕೆ. ಇದನ್ನು ಅರ್ಚಕರು, ಮಠಾದೀಶರು ಹಾಗೂ ದೇವರನ್ನು ಆರಾಧಿಸುವವರು ಎಲ್ಲರೂ ಆಚರಿಸುತ್ತಾರೆ. ಅಂತೆಯೇ ಶ್ರೀರಾಮನಿಗೆ ಪ್ರಧಾನಿಯವರು ನೈವೇದ್ಯ ನೀಡುವಾಗ ನಾವು ನೋಡಬಾರದೆಂದು ಆ ರೀತಿ ಮಾಡಿದೆವು ಎಂದು ಹೇಳಿದ್ದಾರೆ. ಶ್ರೀಗಳ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

1 Comment
Leave A Reply

Your email address will not be published.