Ayodhya: ರಾಮಮಂದಿಯ ಉದ್ಘಾಟನೆ ಬೆನ್ನಲ್ಲೇ ಉಗ್ರ ಸಂಘನೆಯ ಮೂವರು ಅರೆಸ್ಟ್‌; ಅಯೋಧ್ಯೆ ಸುತ್ತಮುತ್ತ ಹೈ ಅಲರ್ಟ್‌ ಘೋಷಣೆ!!

Ayodhya: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿದ್ದು, ಇಂದಿನಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಹೀಗಾಗಿ ಲಕ್ಷಾಂತರ ಭಕ್ತಾಧಿಗಳು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಇದರ ನಡುವೆ ಅಯೋಧ್ಯೆಗೆ ಕರಿನೆರಳ ಛಾಯೆ ಮೂಡಿದೆ. ಅದುವೇ ಉಗ್ರರ ನುಸುಳು ಪ್ರಯತ್ನ. ಪ್ರೊ. ಖಲಿಸ್ತಾನ್‌ ಚಳುವಳಿಯ SFJ ಉಗ್ರ ಸಂಘಟನೆಯ ಮೂವರು ಸದಸ್ಯರನ್ನು ಅಯೋಧ್ಯೆ ಪೊಲೀಸರು ಬಂಧಿಸಿದ್ದಾರೆ.

 

ಈ ಬಂಧನ ನಡೆದ ಬೆನ್ನಲ್ಲೇ ಅಯೋಧ್ಯೆಯಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಪೊಲೀಸ್‌ ನಾಕಾಬಂಧಿಯನ್ನು ಅಯೋಧ್ಯೆಗೆ ಪ್ರವೇಶಿಸುವ ಎಲ್ಲಾ ರಸ್ತೆಗಳಲ್ಲಿ ಮಾಡಲಾಗಿದೆ. ವಾಹನಗಳನ್ನು ಕೂಡಾ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಹಾಗೂ ಅಯೋಧ್ಯೆಯಲ್ಲಿ ಜ.26 ರವರೆಗೆ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಉಗ್ರ ಸಂಘಟನೆಯ ಮೂವರ ಬಂಧನ ಮಾಡಿದ ಕಾರಣ ಅಯೋಧ್ಯೆಯಲ್ಲಿ ಭದ್ರತೆ ಹೆಚ್ಚಿದೆ.

ಅಯೋಧ್ಯೆಗೆ ಬರುವ ಭಕ್ತರು ಪೊಲೀಸರ ತಪಾಸಣೆಗೆ ಸಹಕರಿಸಬೇಕು ಎಂಬ ಮನವಿಯನ್ನು ಪೊಲೀಸರು ಮಾಡಿದ್ದಾರೆ.

Leave A Reply

Your email address will not be published.