Mysore : ಮೈಸೂರಲ್ಲಿ ಸಂಸದ ಪ್ರತಾಪ್ ಸಿಂಹ ಮೇಲೆ ಮುತ್ತಿಗೆ – ಚಳಿಬಿಡಿಸಿದ ಮತದಾರ ಪ್ರಭುಗಳು !! ವಿಡಿಯೋ ವೈರಲ್

Mysore: ಸಂಸದ ಪ್ರತಾಪ್ ಸಿಂಹ ಅವರು ಕೆಲ ಸಮಯದಿಂದ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಸುದ್ದಿಯಾಗುತ್ತಿದ್ದಾರೆ. ಸಂಸತ್ತಿನಲ್ಲಾದ ಭದ್ರತಾ ಲೋಪದಿಂದಾಗಿ ಅವರ ಇಮೇಜ್ ಕೊಂಚ ಡ್ಯಾಮೇಜ್ ಆದರೂ ರಾಜಕೀಯ ವಲಯದಲ್ಲಿಸಕ್ರಿಯವಾಗಿಯೇ ಇದ್ದಾರೆ. ಇದೀಗ ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರ ಮೇಲೆ ಅವರ ಕ್ಷೇತ್ರದ ಮತದಾರ ಪ್ರಭುಗಳೇ ಮುತ್ತಿಗೆ ಹಾಕಿ ಚಳಿಬಿಡಿಸಿದ್ದಾರೆ.

https://www.instagram.com/reel/C2YwWjWhFMP/?igsh=ZmRjZjVzcW93NGZ4

ಹೌದೈ, ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಂಭ್ರಮ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ(Mysore) ಎಚ್ ಡಿ ಕೋಟೆಯಲ್ಲಿ ರಾಮಲಲ್ಲಾನ ಮೂರ್ತಿ ಕೆತ್ತಿದ ಶಿಲೆ ಸಿಕ್ಕ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಶಿಲನ್ಯಾಸ ಮಾಡಲು ಅಲ್ಲಿಗೆ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಹಾಗೂ ಸಂಸದ ಪ್ರತಾಪ್ ಸಿಂಹ(Prathap simha) ಅವರು ತೆರಳಿದ್ದಾರೆ.

ಇದನ್ನೂ ಓದಿ: Pregnant Symptoms: ನಿಮ್ಮ ದೇಹದಲ್ಲಿ ಹೀಗೆ ಬದಲಾವಣೆ ಆಗ್ತಾ ಇದ್ಯಾ? ಹಾಗಾದ್ರೆ ನೀವು ಗರ್ಭಿಣಿ ಎಂದರ್ಥ

ಈ ಸಂದರ್ಭದಲ್ಲಿ ಅಲ್ಲಿ ಭಾರೀ ಜನಸ್ತೋಮ ನೆರೆದಿದ್ದು, ಸಂಸದರು ಆಗಮಿಸುತ್ತಿದ್ದಂತೆ ದಲಿತ ನಾಯಕರು ಸಂಸದರು ದಲಿತ ವಿರೋಧಿಗಳು ಎಂದು ಅವರನ್ನು ಮುತ್ತಿಗೆ ಹಾಕಿದ್ದಾರೆ. ಆಗ ಪೋಲೀಸರು ಬಂದು ತಡೆಯಲು ಪ್ರಯತ್ನಿಸಿದ್ದಾರೆ. ಹೀಗಾಗಿ ಕೆಲಕಾಲ ಗೊಂದಲ ವಾತಾವರಣ ನಿರ್ಮಾಣವಾಗಿದೆ. ಇದರ ವಿಡಿಯೋ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

Leave A Reply

Your email address will not be published.