Football Player Death: ಉದಯೋನ್ಮುಖ ಫುಟ್ಬಾಲ್ ಆಟಗಾರ ಮೃತ್ಯು; ಸಿಎಂ ಸಿದ್ದರಾಮಯ್ಯ ಸಂತಾಪ!!

Football Player Death: ರಾಜ್ಯದ ಖ್ಯಾತ ಫುಟ್ಬಾಲ್ ಆಟಗಾರ(Famous football player) ಮೋನಿಶ್ ಕೆ(Monish K)ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ(Football Player Death) ಘಟನೆ ನಿನ್ನೆ ತಡರಾತ್ರಿ ಕೆಆರ್ ಪುರ ಸಂಚಾರಿ ಠಾಣಾ ವ್ಯಾಪ್ತಿಯ ರಾಮಮೂರ್ತಿ ನಗರ ಫ್ಲೈ ಓವರ್ ಮೇಲೆ ನಡೆದಿದೆ.

ಇದನ್ನೂ ಓದಿ: BBK Season 10: ವಿಜಯೀ ಭವ ಸಂಗೀತಾ ಶೃಂಗೇರಿ; ಟ್ರೆಂಡ್‌….ಹೆಚ್ಚಳ!!!

ರಾಜ್ಯದ ಉದಯೋನ್ಮುಖ ಫುಟ್ಬಾಲ್ ಆಟಗಾರರಾಗಿರುವ ಮೊನೀಶ್ ಕೆ (27)ಮೃತ ದುರ್ದೈವಿಯಾಗಿದ್ದಾರೆ. ನಿನ್ನೆ ತಡರಾತ್ರಿ ಸುಮಾರು 2 ಗಂಟೆ ವೇಳೆ ಬೈಕ್ನಲ್ಲಿ ಹೊರಟಿದ್ದ ಮೋನಿಶ್ ಅವರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ(Accident)ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ತೀವ್ರವಾಗಿ ಗಾಯಗೊಂಡು ರಸ್ತೆಮೇಲೆ ಬಿದ್ದಿದ್ದ ಮೋನಿಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು ಕೂಡ ಚಿಕಿತ್ಸೆ ಫಲಿಸದೇ ಇಂದು ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ.ಈ ಘಟನೆ ಬಗ್ಗೆ ಮಾಹಿತಿ ತಿಳಿದು ಸಿಎಂ ಸಿದ್ದರಾಮಯ್ಯ( CM Siddaramaiah)ಅಧಿಕೃತ ಟ್ವಿಟ್ಟರ್ ಎಕ್ಸ್ ಮೂಲಕ ತೀವ್ರ ಸಂತಾಪ ಸೂಚಿಸಿದ್ದಾರೆ.

Leave A Reply

Your email address will not be published.