No holiday In Karnataka: ಕರ್ನಾಟಕದಲ್ಲಿ ನಾಳೆ ರಜೆ ಇಲ್ಲ- ಸಿಎಂ ಘೋಷಣೆ!!

No Holiday In Karnataka: ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಹಿನ್ನೆಲೆ ಕರ್ನಾಟಕದ ಶಾಲೆಗಳಿಗೂ(Karnataka Schools)ರಜೆ(School Holiday)ಘೋಷಣೆ ಆಗಲಿದೆಯೇ ಎಂಬ ಪ್ರಶ್ನೆ ಸಹಜವಾಗಿ ಪೋಷಕರನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಇದೀಗ ಉತ್ತರ ಲಭ್ಯವಾಗಿದೆ.

 

ಕರ್ನಾಟಕದಲ್ಲಿಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತಾ ಎಂಬ ಪ್ರಶ್ನೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿದೆ ಮೂಡಿತ್ತು. ಇದೀಗ, ಜನವರಿ 22ರಂದು ರಾಜ್ಯದಲ್ಲಿ ರಜೆ ಘೋಷಣೆ ಇಲ್ಲ(No Holiday In Karnataka)ಎಂದು ಸಿಎಂ ಸಿದ್ಧರಾಮಯ್ಯ ಮಾಹಿತಿ ನೀಡಿದ್ದಾರೆ.

 

ಈಗಾಗಲೇ ಸ್ವಯಂ ಪ್ರೇರಿತರಾಗಿ ಜನವರಿ 22ರ ಸೋಮವಾರ ಕೆಲ‌ ಖಾಸಗಿ ಶಾಲೆಗಳು ರಜೆ ಘೋಷಣೆ ಮಾಡಿದ್ದು,ಇದರ ಜೊತೆಗೆ ಈಗಾಗಲೇ ರಜೆ ಘೋಷಣೆ ‌ಮಾಡುವಂತೆ ಸರ್ಕಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಮನವಿ ಸಲ್ಲಿಸಿವೆ. ಈ ನಡುವೆ, ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ನಾಳೆ ರಜೆ ಇಲ್ಲ ಎಂದು ತುಮಕೂರಿನಲ್ಲಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ದಕ್ಷಿಣ ಕನ್ನಡದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ನಿಟ್ಟೆ ವಿಶ್ವವಿದ್ಯಾಲಯ ಜನವರಿ 22ರಂದು ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿದೆ.

Leave A Reply

Your email address will not be published.