School Holiday: ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಶಾಲೆಗೆ ರಜೆ ಹಾಕಿದರೆ 1000ರೂಪಾಯಿ ದಂಡ!!

School Holiday : ಅಯೋಧ್ಯೆ ರಾಮಮಂದಿರ(Ayodhya Ram Mandir)ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಐತಿಹಾಸಿಕ ಕ್ಷಣವನ್ನು ಕಣ್ಣುಂಬಿಕೊಳ್ಳಲು ಇಡೀ ದೇಶವೇ ಸಜ್ಜಾಗಿರುವ ನಡುವೆ ಅಚ್ಚರಿಯ ಘಟನೆ ವರದಿಯಾಗಿದೆ.

ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಹಿನ್ನೆಲೆ ದೇಶದ ಬಹುತೇಕ ಕಡೆಗಳಲ್ಲಿ ಶಾಲೆಗಳಿಗೆ ರಜೆ (School Holiday)ಘೋಷಣೆ ಮಾಡಲಾಗಿದೆ. ಈ ನಡುವೆ, ಕರ್ನಾಟಕದ ಶಾಲೆಗಳಿಗೆ(Karnataka Schools)ರಜೆ(School Holiday) ಘೋಷಣೆ ಮಾಡಿಲ್ಲ. ಇದೀಗ ಚಿಕ್ಕಮಗಳೂರು ನಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಮಕ್ಕಳಿಗೆ ಸೋಮವಾರ ರಜೆ ಹಾಕದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಇದನ್ನು ಓದಿ: RRB ALP Recruitment 2024: ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ:5696 ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗೆ ಅಧಿಸೂಚನೆ ಬಿಡುಗಡೆ; ಇಂದೇ ಅರ್ಜಿ ಸಲ್ಲಿಸಿ!!

ಚಿಕ್ಕಮಗಳೂರಿನ ಸೇಂಟ್ ಜೋಸೆಫ್ ಶಾಲೆಯಲ್ಲಿ ಮಕ್ಕಳು ಯಾವುದೇ ಕಾರಣಕ್ಕೂ ಸೋಮವಾರ ರಜೆ ಹಾಕದಂತೆ ಸೂಚನೆ ನೀಡಲಾಗಿದ್ದು, ಒಂದು ವೇಳೆ ಈ ದಿನ ಶಾಲೆಗೆ ರಜೆ ಹಾಕಿದರೆ 1 ಸಾವಿರ ದಂಡ ಹಾಕಲಾಗುತ್ತದೆ ಎಂದು ಶಾಲೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ ಎಂದು ಹೇಳಲಾಗಿದೆ.

Leave A Reply

Your email address will not be published.