Acharya Satyendra Das: ವೈರಲ್‌ ಆಗುತ್ತಿರುವ ರಾಮಲಲ್ಲಾ ಮೂರ್ತಿಯ ಕುರಿತು ಅಯೋಧ್ಯೆಯ ಅರ್ಚಕ ಸತ್ಯೇಂದ್ರ ದಾಸ್‌ ರಿಂದ ಶಾಕಿಂಗ್‌ ಹೇಳಿಕೆ!!!

Share the Article

Ayodhya Ram Mandir: ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ಸ್ಥಾಪಿಸಿರುವ ಬಾಲ ರಾಮ ಅಥವಾ ರಾಮ ಲಲ್ಲಾನ ಮೂರ್ತಿಯ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ. ಆದರೆ ಈ ಫೋಟೋ ನಿಜವಾದುದಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ (Acharya Satyendra Das) ಹೇಳಿದ್ದಾರೆ.

ಈ ಕುರಿತು ಅವರು ಸ್ಪಷ್ಟೀಕರಣ ನೀಡಿದ್ದಾರೆ. ರಾಮ ಲಲ್ಲಾ ಮೂರ್ತಿಯ ಫೋಟೋ ಹೇಗೆ ಸೋರಿಕೆಯಾಯಿತು ಎನ್ನುವುದರ ಕುರಿತು ತನಿಖೆ ನಡೆಸಬೇಕೆಂದು ಅವರು ಆಗ್ರಹ ಮಾಡಿದ್ದಾರೆ.

ಪ್ರಾಣ ಪ್ರತಿಷ್ಠೆ ಪೂರ್ಣಗೊಳ್ಳುವ ಮುನ್ನ ಬಾಲರಾಮನ ಮೂರ್ತಿಯ ಮುಚ್ಚಿರುವ ಕಣ್ಣುಗಳನ್ನು ತೆರೆಯುವುದಿಲ್ಲ. ಶ್ರೀರಾಮನ ಕಣ್ಣುಗಳು ಕಾಣುವ, ವೈರಲ್‌ ಆಗಿರುವ ವಿಗ್ರಹ ನಿಜವಾದುದಲ್ಲ. ಮೂರ್ತಿಯ ಕಣ್ಣುಗಳು ಕಾಣುವಂಥ ಫೋಟೋ ಬಹಿರಂಗವಾಗಿದ್ದು ಆಗಿದ್ದರೆ ಇದು ಹೇಗಾಯಿತು ಎನ್ನುವುದರ ಕುರಿತು ತನಿಖೆಯಾಗಬೇಕು ಎಂದು ಹೇಳಿದ್ದಾರೆ.

Leave A Reply