Petrol Diesel Price: ವಾಹನ ಸವಾರರಿಗೆ ಖುಷಿಯ ಸುದ್ದಿ; ಪೆಟ್ರೋಲ್‌ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿ ಆದೇಶ ಹೊರಡಿಸಿದ ಸರಕಾರ!!!

Petrol Diesel Price : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 75 ಡಾಲರ್ ಗೆ ಇಳಿಕೆ ಕಂಡಿದೆ. ಭಾರತದಲ್ಲಿ ತೈಲ ಬೆಲೆಯಲ್ಲಿ ಇದುವರೆಗೆ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಆದರೆ, ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಏಪ್ರಿಲ್ 2022 ರಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ (Petrol Diesel Price)ಯಾವುದೇ ಬದಲಾವಣೆಯಾಗಿರಲಿಲ್ಲ. ಈ ನಡುವೆ, ಪೆಟ್ರೋಲ್(PETROL), ಡೀಸೆಲ್ ಬೆಲೆ 5ರಿಂದ 10 ರೂಪಾಯಿ ಇಳಿಕೆಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: Ayodhya Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠೆ ನಿಷೇಧ ಕೋರಿ ಪಿಐಎಲ್!!!

ವರದಿಯ ಅನುಸಾರ, ತೈಲ ಕಂಪನಿಗಳ ಲಾಭವು ಡಿಸೆಂಬರ್ 2023 ರ ತ್ರೈಮಾಸಿಕದ ವೇಳೆಗೆ 75000 ಕೋಟಿ ರೂ.ಯಾಗಿದೆ. ತೈಲ ಕಂಪನಿಗಳ ಹೆಚ್ಚುತ್ತಿರುವ ಲಾಭದ ಹಿನ್ನೆಲೆ, ಕಂಪನಿಗಳು ಸಾಮಾನ್ಯ ಜನರಿಗೆ ಪರಿಹಾರ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಣನೀಯ ಇಳಿಕೆ ಮಾಡಬಹುದು ಎಂದು ಹೇಳಲಾಗಿದೆ. ವರದಿಯ ಪ್ರಕಾರ, ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಲೀಟರ್‌ಗೆ 10 ರೂ.ಗಳಷ್ಟು ಲಾಭಾಂಶವನ್ನು ಒಳಗೊಂಡಿದೆ. ತೈಲ ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ಕಂಪನಿಗಳು ಈ ಮಾರ್ಜಿನ್ ಅನ್ನು ಗ್ರಾಹಕರಿಗೆ ರವಾನಿಸಬಹುದು ಎಂದು ಹೇಳಲಾಗುತ್ತಿದೆ.

Leave A Reply

Your email address will not be published.