Nepal Stamp: ಅಯೋಧ್ಯಾ ರಾಮ ಪ್ರತಿಷ್ಠಾಪನೆ ಬಗ್ಗೆ ನೇಪಾಳಕ್ಕೆ ಮೊದಲೇ ಗೊತ್ತಿತ್ತೇ?? ಅಚ್ಚರಿ ಮೂಡಿಸುತ್ತಿದೆ 57 ವರ್ಷ ಹಿಂದಿನ ನೇಪಾಳದ ಅಂಚೆ ಚೀಟಿ!!
ಅಂಚೆ ಚೀಟಿಯಲ್ಲಿ ರಾಮಪ್ರತಿಷ್ಠಾ ವರ್ಷ ಪ್ರಕಟ!!
Nepal Stamp: ಹಿಂದೂಗಳ ಅದೆಷ್ಟೋ ವರ್ಷಗಳ ಕನಸು ಇದೀಗ ಸಾಕಾರಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈ ನಡುವೆ, ನೇಪಾಳದ ಅಂಚೆ ಚೀಟಿಯೊಂದು (Nepal Stamp)ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಹೌದು!! 57 ವರ್ಷಗಳ ಹಿಂದಿನ ನೇಪಾಳ ಅಂಚೆ ಚೀಟಿಯಲ್ಲಿ ಅಚ್ಚಾದ ಫೋಟೋವೊಂದು ವೈರಲ್ ಆಗಿದೆ.
ಅಯೋಧ್ಯಾ ರಾಮ ಮಂದಿರದ (Ayodhya Ram Mandir)ಪ್ರತಿಷ್ಠಾಪನೆಯ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಬೆನ್ನಲ್ಲೇ ನೇಪಾಳದಿಂದ 57 ವರ್ಷಗಳ ಹಿಂದೆ ಅಚ್ಚಾದ ಅಂಚೆ ಚೀಟಿಯ ಫೋಟೋವೊಂದು ಹೊರಬಿದ್ದಿದೆ. ನೇಪಾಳದಲ್ಲಿ 57 ವರ್ಷಗಳ ಹಿಂದೆ ರಾಮನವಮಿ ಪ್ರಯುಕ್ತ ಬಿಡುಗಡೆಯಾದ ಸ್ಟಾಂಪೊಂದು ಅದರ ಮೇಲೆ ರಾಮಸೀತೆಯ ಚಿತ್ರದ ಜೊತೆಗೆ 2024ನೇ ಇಸವಿಯನ್ನು ಒಳಗೊಂಡಿದೆ. ಹೀಗಾಗಿ, ರಾಮಮಂದಿರ ಉದ್ಘಾಟನೆ ವರ್ಷವನ್ನು ಆಗಲೇ ಊಹಿಸಿದ್ದರೇ?? ಎಂಬ ಕೂತುಹಲಕಾರಿ ಪ್ರಶ್ನೆಯನ್ನು ಹುಟ್ಟು ಹಾಕುತ್ತಿದೆ.
ಏಪ್ರಿಲ್ 18, 1967ರಂದು ರಾಮ ನವಮಿಯ ಸಂದರ್ಭದಲ್ಲಿ ಈ ಅಂಚೆಚೀಟಿಯನ್ನು ಭಗವಾನ್ ರಾಮನ ಜನ್ಮದಿನದಂದು ಬಿಡುಗಡೆ ಮಾಡಲಾಗಿದೆ. ಇದರ ಮೇಲೆ ರಾಮ ಸೀತೆಯ ಚಿತ್ರವನ್ನು ಒಳಗೊಂಡಿದ್ದು, ಇದರ ಕೆಳಗೆ, ವಿ.ಎಸ್.(ವಿಕ್ರಮ ಸಂವತ್ಸರ ) 2024 ಎಂದು ಬರೆಯಲಾಗಿದೆ. ಅಷ್ಟಕ್ಕೂ ಇದರ ಹಿಂದಿನ ಅಸಲಿ ಕಾರಣ ಹುಡುಕುತ್ತಾ ಹೊರಟಾಗ, ನೈಜ ಕಾರಣ ಬೇರೆಯೇ ಇದೆ ಎಂಬುದು ತಿಳಿಯುತ್ತದೆ. ನೇಪಾಳ ಮತ್ತು ಭಾರತದ ಕೆಲವು ಭಾಗಗಳಲ್ಲಿ ಅನುಸರಿಸುವ ಹಿಂದೂ ಕ್ಯಾಲೆಂಡರ್‌ನ ವಿಕ್ರಮ್ ಸಂವತ್‌ನ 2024 ವರ್ಷವನ್ನು ಅಂಚೆ ಚೀಟಿ ಮೇಲೆ ಹಾಕಲಾಗಿದೆಯಂತೆ. ಅಂದರೆ, ವಿಕ್ರಮ ಸಂವತ್ ಗ್ರೆಗೋರಿಯನ್ ಕ್ಯಾಲೆಂಡರ್‌ಗಿಂತ 57 ವರ್ಷಗಳ ಮುಂದೆ ಇದೆಯಂತೆ. ಹೀಗಾಗಿ, ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ 1967 ರ ವರ್ಷವು ವಿಕ್ರಮ್ ಸಂವತ್‌ನಲ್ಲಿ 2024 ಆಗಿದ್ದ ಹಿನ್ನೆಲೆ 1967ರಲ್ಲಿ ಬಿಡುಗಡೆಯಾದ ಅಂಚೆಚೀಟಿಯ ಮೇಲೆ 2024 ಎಂದು ಬರೆಯಲಾಗಿದೆಯಂತೆ.