Congress Flag: ರಾಮ ಮಂದಿರದ ಮುಂದೆ ಕಾಂಗ್ರೆಸ್ ಧ್ವಜ ಹಾರಾಟ ಆರೋಪ ; ಆಕ್ರೋಶಿತರು ಮಾಡಿದ್ದೇನು ಗೊತ್ತೇ??

Congress Flag : ಅಯೋಧ್ಯಾ ರಾಮ ಮಂದಿರ(Ayodhya Ram Mandir)ಉದ್ಘಾಟನೆ ನಡುವೆ ರಾಜಕೀಯ ವಾದ ವಿವಾದಗಳು ಮುಂದುವರೆದಿದ್ದು, ಈ ನಡುವೆ ಕಾಂಗ್ರೆಸ್ ಬೆಂಬಲಿಗರು ಕಾಂಗ್ರೆಸ್ ದ್ವಜ(Congress Flag)ಹಿಡಿದು ರಾಮ ದರ್ಶನಕ್ಕೆ ತೆರಳುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ.

 

ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರಾದ ದೀಪೇಂದ್ರ ಹೂಡ, ಅಜಯ್ ರೈ, ಕಾಂಗ್ರೆಸ್ ಮಹಿಳಾ ಮೋರ್ಚಾ ನಾಯಕಿ ರೇಣು ರೈ ಸೇರಿದಂತೆ ಹಲವು ನಾಯಕರು ಆಯೋಧ್ಯೆಗೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಮಹಿಳಾ ಮೋರ್ಚಾ ನಾಯಕಿ ಹಾಗೂ ಇತರ ಕಾಂಗ್ರೆಸ್ ನಾಯಕರು ಪವಿತ್ರ ಧಾರ್ಮಿಕ ಸ್ಥಳವಾದ ರಾಮ ಮಂದಿರ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಾರಾಡಿಸಿದ್ದಾರೆ.

ಈ ಸಂದರ್ಭ ಪವಿತ್ರ ಧಾರ್ಮಿಕ ಆವರಣದಲ್ಲಿ ರಾಜಕೀಯ ಧ್ವಜ ಯಾಕೆ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ. ಜೈಶ್ರೀರಾಮ್ ಘೋಷಣೆ ಕೂಗುತ್ತಾ ಆಕ್ರೋಶಗೊಂಡ ಗುಂಪು ಕಾಂಗ್ರೆಸ್ ಧ್ವಜ ಕಿತ್ತೆಸೆದಿದ್ದಾರೆ. ರಾಮ ಮಂದಿರ ಆವರಣದಲ್ಲಿ ರಾಜಕೀಯ ಬೇಡ ಎಂದು ಆಕ್ರೋಶಿತರ ಗುಂಪು ಎಚ್ಚರಿಕೆ ನೀಡಿದೆ. ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಾಗ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಪೊಲೀಸರು ರಕ್ಷಣೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

https://twitter.com/PTI_News/status/1746867230808395853?ref_src=twsrc%5Etfw%7Ctwcamp%5Etweetembed%7Ctwterm%5E1746867230808395853%7Ctwgr%5E%7Ctwcon%5Es1_c10&ref_url=https%3A%2F%2Fapi-news.dailyhunt.in%2F

 

Leave A Reply

Your email address will not be published.