Home Interesting Anjandri: ರಾಮ ಭಕ್ತಾದಿಗಳಿಗೆ ಸಿಹಿ ಸುದ್ದಿ; ಅಂಜನಾದ್ರಿ ಬೆಟ್ಟದ ಕುರಿತ ಮಹತ್ವದ ಮಾಹಿತಿ ಪ್ರಕಟ!!

Anjandri: ರಾಮ ಭಕ್ತಾದಿಗಳಿಗೆ ಸಿಹಿ ಸುದ್ದಿ; ಅಂಜನಾದ್ರಿ ಬೆಟ್ಟದ ಕುರಿತ ಮಹತ್ವದ ಮಾಹಿತಿ ಪ್ರಕಟ!!

Anjandri

Hindu neighbor gifts plot of land

Hindu neighbour gifts land to Muslim journalist

Anjanadri: ಶ್ರೀರಾಮನ ಜನ್ಮಸ್ಥಳ ಆಯೋಧ್ಯೆಯಲ್ಲಿ (Ayodhya)ರಾಮ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ,ಹಂಪಿಯ ಸಮೀಪದಲ್ಲಿರುವ ಅಂಜನಾದ್ರಿ(Anjanadri) ಹನುಮಂತನ(Anjaneya) ಜನ್ಮಸ್ಥಳವೆಂಬ (Anjaneya birthplace)ನಂಬಿಕೆಯಿದೆ. ರಾಮಮಂದಿರ ಶಂಕುಸ್ಥಾಪನೆಯ ದಿನವೇ ಅಂಜನಾದ್ರಿ ಬೆಟ್ಟದ ತಳದಲ್ಲಿ ಹನುಮಾನ್ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿರುವ ಕುರಿತು ಕಿಷ್ಕಿಂದಾ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಮಠಾಧೀಶ ಗೋವಿಂದಾನಂದ ಸರಸ್ವತಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಪ್ರದೇಶಕ್ಕೆ ದೇಶಾದ್ಯಂತ ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆ ಯಿದೆ.

ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ರಾಮಧೂತ ಹನುಮಂತನ ಜನ್ಮಸ್ಥಳ ಅಂಜನಾದ್ರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳದ ಗಂಗಾವತಿ ತಾಲೂಕಿನ ಪ್ರಸಿದ್ಧ ಅಂಜನಾದ್ರಿಯಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗುತ್ತಿದೆ. ಈ ಮಂದಿರ ನಿರ್ಮಾಣ ಕಾರ್ಯ ಪೂರ್ಣವಾಗಲು 3-4 ವರ್ಷಗಳು ಬೇಕಾಗಲಿದ್ದು, ಇದಾದ ಬಳಿಕ ಅಯೋಧ್ಯೆ ಮತ್ತು ಅಂಜನಾದ್ರಿ ಎರಡೂ ದೇವಾಲಯಗಳಿಗೂ ಭಕ್ತರು ಭೇಟಿ ನೀಡಬಹುದು.