Pregnant Women And Snake: ಯಾವುದೇ ವಿಷಪೂರಿತ ಹಾವು ಗರ್ಭಿಣಿಯ ಹತ್ತಿರವೂ ಸುಳಿಯುವುದಿಲ್ಲ?? ಯಾಕೆ ಗೊತ್ತಾ?? ಇದರ ಹಿಂದಿದೆ ನಿಮಗೆ ಗೊತ್ತಿರದ ರೋಚಕ ವಿಚಾರ!!

Snake and pregnant womans :ಅನೇಕ ಸಂಪ್ರದಾಯಗಳು ಮತ್ತು ನಂಬಿಕೆಗಳು ಸನಾತನ ಹಿಂದೂ ಧರ್ಮದೊಂದಿಗೆ (Hindu Religion)ಸಂಬಂಧವನ್ನು ಬೆಸೆದುಕೊಂಡಿದೆ.ಧರ್ಮಗ್ರಂಥಗಳು, ವೇದಗಳು ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾದ ಕೆಲವು ನಂಬಿಕೆಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅನೇಕ ನಂಬಿಕೆಗಳ ಪ್ರಕಾರ, ಹಾವುಗಳು ಗರ್ಭಿಣಿ ಮಹಿಳೆಯನ್ನು (Snake and pregnant womans)ಕಚ್ಚುವುದಿಲ್ಲ ಎಂದು ಹೇಳಲಾಗುತ್ತದೆ. ಈ ವಿಚಾರ ಕೇಳಿದಾಗ ನಿಮಗೆ ಅಚ್ಚರಿ ಎನಿಸಬಹುದು. ಅಷ್ಟೆ ಅಲ್ಲದೇ, ಗರ್ಭಿಣಿಯನ್ನು(Pregnant Woman)ನೋಡಿದ ನಂತರ ಹಾವು(Snake)ಕುರುಡಾಗುತ್ತದೆ( Blind)ಎನ್ನುವ ನಂಬಿಕೆ ಕೂಡ ಇದೆ.

ಓರ್ವ ಮಹಿಳೆ ಗರ್ಭಧರಿಸುತ್ತಿದ್ದಂತೆ ಆಕೆಯ ಬಳಿ ಹಾವುಗಳು ಸುಳಿಯುವುದಿಲ್ಲ ಎನ್ನಲಾಗುತ್ತದೆ. ಆದರೆ, ಇದರ ಹಿಂದಿನ ಕಾರಣವನ್ನು ನಾವು ಬ್ರಹ್ಮವೈವರ್ತ ಪುರಾಣದಲ್ಲಿ ನೋಡಬಹುದು. ಪ್ರಕೃತಿಯು ಹಾವಿಗೆ ಕೆಲವು ವಿಶೇಷ ಇಂದ್ರಿಯಗಳನ್ನು ನೀಡಿದ್ದು, ಇದರಿಂದ ಮಹಿಳೆ ಗರ್ಭಿಣಿಯಾಗಿದ್ದಾಳೆ ಈ ಎಂಬ ವಿಚಾರವನ್ನು ಸುಲಭವಾಗಿ ಅವುಗಳಿಗೆ ತಿಳಿಯುತ್ತದಂತೆ. ಗರ್ಭಾವಸ್ಥೆಯ ನಂತರ ಸ್ತ್ರೀ ದೇಹದಲ್ಲಿ ಕೆಲವು ಅಂಶಗಳು ಉತ್ಪತ್ತಿಯಾಗುವುದನ್ನು ಹಾವುಗಳು ಸುಲಭವಾಗಿ ಗ್ರಹಿಸುತ್ತದೆ ಎನ್ನಲಾಗುತ್ತದೆ.

 

ಗರ್ಭಿಣಿಯನ್ನು ಕಚ್ಚದೇ ಇರುವುದರ ಹಿಂದೆ ಧಾರ್ಮಿಕ ನಂಬಿಕೆ ಮಾತ್ರವಲ್ಲದೆ ವೈಜ್ಞಾನಿಕ ಕಾರಣ ಕೂಡ ಇದೆ ಎನ್ನಲಾಗುತ್ತದೆ. ಗರ್ಭಧಾರಣೆಯ ಬಳಿಕ ಮಹಿಳೆಯ ದೇಹದಲ್ಲಿ ಕೆಲವು ಅಂಶಗಳು ರೂಪುಗೊಳ್ಳುವ ಜೊತೆಗೆ ಅನೇಕ ಬದಲಾವಣೆಯಾಗುತ್ತದೆ. ಹಾರ್ಮೋನುಗಳ ಸ್ರವಿಸುವಿಕೆಯಾಗುವ ಹಿನ್ನೆಲೆ ಗರ್ಭಾವಸ್ಥೆಯಲ್ಲಿ ಮಹಿಳೆಯ ಸ್ವಭಾವ, ರುಚಿ, ಬಣ್ಣ ಮೊದಲಾದವು ಬದಲಾಗುತ್ತವೆ. ಮಹಿಳೆಯ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯನ್ನು ಹಾವು ಗ್ರಹಿಸುತ್ತವೆ ಎನ್ನಲಾಗುತ್ತದೆ. ಹೀಗಾಗಿ, ಹಾವುಗಳು ಗರ್ಭಿಣಿಯ ಹತ್ತಿರವೂ ಸುಳಿಯುವುದಿಲ್ಲ ಎನ್ನಲಾಗುತ್ತದೆ.

 

ಬ್ರಹ್ಮವೈವರ್ತ ಪುರಾಣದ ಕಥೆಯ ಪ್ರಕಾರ, ಒಮ್ಮೆ ಗರ್ಭಿಣಿ ಮಹಿಳೆಯೊಬ್ಬಳು ಸಂಪೂರ್ಣವಾಗಿ ದೇವಾಲಯದಲ್ಲಿ ಶಿವನನ್ನು ಒಲಿಸಲು ತಪಸ್ಸಿನಲ್ಲಿ ಮುಳುಗಿದ್ದಾಗ ಎರಡು ಹಾವುಗಳನ್ನು ಶಿವಾಲಯಕ್ಕೆ ಬಂದವಂತೆ. ಇವು ಗರ್ಭಿಣಿಗೆ ಕಿರುಕುಳ ನೀಡಲಾರಂಭಿಸಿದವು. ಇದರಿಂದ ಮಹಿಳೆಯ ಗಮನ ಬೇರೆ ಕಡೆಗೆ ತಿರುಗಿ ತಪಸ್ಸು ಭಂಗವಾಯಿತಂತೆ. ಈ ಸಂದರ್ಭ ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗು, ನಾಗರಹಾವು ಮತ್ತು ಹಾವಿನ ಕುಲ ಗರ್ಭಿಣಿಯ ಬಳಿ ಹೋದಾಗ ಕುರುಡಾಗುತ್ತದೆ ಶಾಪ ನೀಡಿತು ಎಂದು ನಂಬಲಾಗುತ್ತದೆ. ಈ ಘಟನೆಯ ನಂತರ, ಹಾವುಗಳು ಗರ್ಭಿಣಿಯರನ್ನು ನೋಡಿದ ತಕ್ಷಣ ಕುರುಡಾಗುವ ಜೊತೆಗೆ ಗರ್ಭಿಣಿ ಮಹಿಳೆಯನ್ನು ಕಚ್ಚುವುದಿಲ್ಲ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ, ಗರ್ಭಿಣಿಗೆ ಹಾವಿನ ಕನಸು ಸಹ ಬೀಳುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ.

ಇದನ್ನೂ ಓದಿ: DA Hike: ಕೇಂದ್ರ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ; ವೇತನ ಹೆಚ್ಚಳ ಸೇರಿದಂತೆ ಸಿಗಲಿದೆ ಈ ಎಲ್ಲಾ ಪ್ರಯೋಜನ!!

Leave A Reply

Your email address will not be published.