Rama mandir: ರಾಮ ಮಂದಿರ ನಿರ್ಮಾಣಕ್ಕೆ ಹೆಚ್ಚು ದೇಣಿಗೆ ನೀಡಿದ್ದೇ ಮುಸ್ಲಿಮರು !!
Rama mandir: ಹಿಂದು- ಮಸ್ಲಿಮರ ನಡುವೆ ಕೋಮು ಸಂಘರ್ಷ ಉಂಟು ಮಾಡಲು ಹಲವರು ಹೊಂಚು ಹಾಕಿದರೆ, ಇದಾವುದಕ್ಕೂ ನಾವು ಸೊಪ್ಪು ಹಾಕುವುದಿಲ್ಲ ಎಂಬಂತೆ ಮೈಸೂರಿನ ಮುಸ್ಲಿಂ ಬಂಧುಗಳು ಭಾವೈಕ್ಯತೆಯನ್ನು ಮೆರೆದಿದ್ದಾರೆ.
ಹೌದು, ಮೈಸೂರಿನ(Mysore) ಮುಸ್ಲಿಂ ಬಂಧುಗಳು ಕೋಮು ಸಂಘರ್ಷ ಉಂಟುಮಾಡುವ ಕಿಡಿಗೇಡಿಗಳಿಗೆ ಸೊಪ್ಪು ಹಾಕದೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಯಾಕೆಂದರೆ ಇಲ್ಲಿನ ದೇವರಾಜ ಮೊಹಲ್ಲಾದಲ್ಲಿ ನಿರ್ಮಾಣಗೊಂಡಿರುವ `ಶ್ರೀಲೋಕಾಭಿರಾಮ’ ರಾಮಮಂದಿರ (Lokabhirama Ram Mandir) ನಿರ್ಮಾಣಕ್ಕೆ ಮುಸ್ಲಿಮರೇ ಹೆಚ್ಚಿನ ದೇಣಿಗೆ ಕೊಟ್ಟಿದ್ದಾರಂತೆ!!
1991ರ ಸಮಯದಲ್ಲಿ ಮೈಸೂರಿನ ದೇವರಾಜ ಮೊಹಲ್ಲಾದಲ್ಲಿ ಶ್ರೀರಾಮ ಮಂದಿರ ಕಾರ್ಯ ಶುರುವಾಯಿತು. ಆಗ ಈ ಮಂದಿರ ನಿರ್ಮಾಣಕ್ಕೆ ಅತಿ ಹೆಚ್ಚಿನ ದೇಣಿಗೆಯನ್ನು ನೀಡಿದ್ದು, ಇಲ್ಲಿನ ಮುಸ್ಲಿಂ ಉದ್ಯಮಿಗಳು. ಅವರು ಆಗಿನ ಕಾಲದಲ್ಲೇ ಸುಮಾರು 1,500 ರೂ. ನಿಂದ 8,000 ರೂ. ವರೆಗೂ ದೇಣಿಗೆ ನೀಡಿದ್ದು, ಅವರ ಸ್ಮರಣಾರ್ಥವಾಗಿ ಅವರ ಹೆಸರು, ಫೋಟೋಗಳನ್ನ ಇಂದಿಗೂ ಮಂದಿರದ ಒಳಗೆ ಹಾಕಲಾಗಿದೆ.
ಇಷ್ಟೇ ಅಲ್ಲದೆ ಮುಖ್ಯವಾದ ವಿಚಾರ ಅಂದರೆ ಅಲ್ಲದೆ ಈ ಶ್ರೀರಾಮ ದೇವಸ್ಥಾನಕ್ಕೆ ಮುಸ್ಲಿಂ ಬಾಂಧವರು ಬಂದು ಈಗಲೂ ಶ್ರೀರಾಮನಿಗೆ ಪೂಜೆ ಸಲ್ಲಿಸುತ್ತಾರೆ. ಇಲ್ಲಿನ ಸ್ಥಳೀಯ ಮುಸ್ಲಿಂ ಬಂಧುಗಳು ಈ ಕುರಿತು ಪ್ರತಿಕ್ರಿಯಿಸಿದ್ದು ನಾವೆಲ್ಲರೂ ಇಲ್ಲಿ ಸಹೋದರರಂತೆ ಇದ್ದೇವೆ. ಸಾಮಾಜ ಸೇವೆ ಮಾಡುತ್ತಾ ನೆಮ್ಮದಿಯಿಂದ ಬದುಕುತ್ತಿದ್ದೇವೆ. 1992ರ ಬಾಬರಿ ಮಸೀದಿ ಹೋರಾಟದ ಸಂದರ್ಭದಲ್ಲಿ ಹಿಂದೂ-ಮುಸ್ಲಿಮರ ಗಲಾಟೆ ಎಲ್ಲೆಡೆ ವ್ಯಾಪಿಸಿತ್ತು. ಆದ್ರೆ ನಮ್ಮ ಮೊಹಲ್ಲಾದಲ್ಲಿ ಅದರ ಕಹಿ ಅನುಭವ ನಮಗೆ ತಾಕಲಿಲ್ಲ. ನಾವೆಲ್ಲರೂ ಅಂದಿನಿಂದ ಈವರೆಗೆ ಅಣ್ಣ-ತಮ್ಮಂದಿರಂತೆ ಇದ್ದೇವೆ. ಈಗಲೂ ದೇವಸ್ಥಾನಕ್ಕೆ ಬರುತ್ತೇವೆ. ದೇವಸ್ಥಾನದ ಕೆಲಸ ಏನೇ ಇದ್ದರೂ ಒಟ್ಟಾಗಿ ಸೇರಿ ಮಾಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.