Chocolates: ಚಾಕಲೇಟ್‌ ತಿಂದ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ವಿಚಿತ್ರ ವರ್ತನೆ; ವಿಚಾರಿಸಿದಾಗ ವಿಷಯ ತಿಳಿದು ಬೆಚ್ಚಿಬಿದ್ದ ಶಿಕ್ಷಕರು, ಪೋಷಕರು!!!

ವಿದ್ಯಾರ್ಥಿಗಳು ಚಾಕಲೇಟ್‌ ತಿನ್ನುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಚಾಕಲೇಟ್‌ ತಿಂದ ವಿದ್ಯಾರ್ಥಿಗಳು ಚಿತ್ರವಿಚಿತ್ರವಾಗಿ ವರ್ತಿಸ ತೊಡಗಿದ ಘಟನೆಯೊಂದು ನಡೆದಿದೆ. ಈ ವಿಚಿತ್ರ ವರ್ತನೆ ಏನು ಎಂದು ಪೋಷಕರಿಗೆ ಮತ್ತು ಶಿಕ್ಷಕರಿಗೆ ತಕ್ಷಣಕ್ಕೆ ಅರ್ಥವಾಗಲಿಲ್ಲ. ಆದರೆ ಕೆಲವು ದಿನಗಳಿಂದ ವಿದ್ಯಾರ್ಥಿಗಳು ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಗಮನಿಸಿ ಕೆಲ ಶಿಕ್ಷಕರು, ಶಾಲೆಯ ಸುತ್ತಮುತ್ತ ವಿಚಾರಿಸಿದ್ದಾರೆ. ಆಗ ತಿಳಿದು ಬಂದಿದ್ದೇ ಬೆಚ್ಚಿ ಬೀಳಿಸುವ ವಿಷಯ. ಇದೀಗ ಈ ಪ್ರಕರಣಕ್ಕೆ ಪೊಲೀಸರ ಎಂಟ್ರಿ ಕೂಡಾ ಆಗಿದೆ.

ಪಾನ್‌ ಗೂಡಂಗಡಿಗಳಲ್ಲಿ ಮಾರುತ್ತಿದ್ದ ಚಾಕಲೇಟನ್ನು ತಿಂದ ವಿದ್ಯಾರ್ಥಿಗಳು ವಿಚಿತ್ರ ವರ್ತನೆ ಮಾಡಿದ್ದರಿಂದ ರಂಗಾರೆಡ್ಡಿ ಜಿಲ್ಲೆಯ ಕೋತೂರ್‌ ಮಂಡಲ ಕೇಂದ್ರದ ಸರಕಾರಿ ಪ್ರೌಢಶಾಲೆಯ ಪಕ್ಕದಲ್ಲೇ ಒರಿಸ್ಸಾದ ಕೆಲವರು ಪಾನ್‌ಗಳಲ್ಲಿ ಮಾರುವ ಚಾಕಲೇಟನ್ನು ಉಚಿತವಾಗಿ ನೀಡಿದ್ದಾರಂತೆ. ಇದನ್ನು ತಿಂದು ವಿದ್ಯಾರ್ಥಿಗಳು ವಿಚಿತ್ರವಾಗಿ ವರ್ತಿಸಿದ್ದಾರೆ. ಇದನ್ನು ಶಿಕ್ಷಕರು ಗಮನಿಸಿದ್ದಾರೆ.

ಶಿಕ್ಷಕರು ಅಕ್ಕಪಕ್ಕ ವಿಚಾರಿಸಿ ಇದು ಏನೆಂದು ವಿಚಾರಿಸಿದರು. ಮೊದಲಿಗೆ ಪಾನ್‌ ಅಂಗಡಿ ವ್ಯಾಪಾರಿಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಚಾಕಲೇಟ್‌ ನೀಡಿದ್ದಾರೆ. ನಂತರ ವಿದ್ಯಾರ್ಥಿಗಳು ಅದರ ಚಟಕ್ಕೆ ಬಿದ್ದಿದ್ದಾರೆ. ನಂತರ ಒಬ್ಬೊಬ್ಬರಿಂದ 20 ರೂ. ಗೆ ಚಾಕಲೇಟ್‌ ನೀಡಿದ್ದಾರೆ ಎನ್ನುವುದು ಪತ್ತೆಯಾಗಿದೆ. ಪಾನ್‌ ಬಾಕ್ಸ್‌ಗಳ ಮಾಲೀಕರ ಬಗ್ಗೆ ಶಂಕೆ ವ್ಯಕ್ತಪಡಿಸಿದ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಲ್ಲಿಗೆ ಬಂದ ಶಂಶಾಬಾದ್‌ ಎಸ್‌ಒಟಿ ಪೊಲೀಸ್‌ ತಂಡ ಮಂಗಳವಾರ ಪಾನ್‌ ಅಂಗಡಿಗಳ ಮೇಲೆ ದಾಳಿ ಮಾಡಿದೆ. ಆಗ ಪತ್ತೆಯಾಗಿದ್ದೇ ಒಂಭತ್ತು ಕೆಜಿ ಗಾಂಜಾ ಚಾಕಲೇಟ್‌ಗಳು. ಕೂಡಲೇ ವಶಪಡಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಒಡಿಷಾದಿಂದ ಗಾಂಜಾ ಚಾಕಲೇಟ್‌ ತಯಾರಿಸಿ ಕೊತ್ತೂರು ಗ್ರಾಮದ ಹಲವಾರು ಪಾನ್‌ ಅಂಗಡಿಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರುತ್ತಿರುವ ವಿಷಯ ನಂತರ ಗಮನಕ್ಕೆ ಬಂದಿದೆ. ವಿಷಯ ತಿಳಿದ ಪೋಷಕರು ದಿಕ್ಕು ತೋಚದೆ ಕುಳಿತಿದ್ದಾರೆ.

1 Comment
  1. Yajna says

    ನಿಮ್ಮ ಚಿತ್ರಗಳಲ್ಲಿ ಬೇರೆ ಬ್ರಾಂಡಿನ ಚಿತ್ರ ಹಾಕಬೇಡಿ.

Leave A Reply

Your email address will not be published.