HSRP Number Plate: ಈ ದಿನದಂದೇ ಕೊನೆಯ ದಿನಾಂಕ, HSRP ನಂಬರ್‌ ಪ್ಲೇಟ್‌ ಪಡೆಯಲು ಏನು ಮಾಡಬೇಕು?

HSRP (ಹೈಸೆಕ್ಯೂರಿಟಿ ನಂಬರ್‌ ಪ್ಲೇಟ್‌) ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಹಲವು ಗಡುವುಗಳನ್ನು ಈಗಾಗಲೇ ನೀಡಿತ್ತು. ಫೆಬ್ರವರಿ 17 ಕೊನೆಯ ದಿನ. ನಕಲಿ ನಂಬರ್‌ ಪ್ಲೇಟ್‌, ವಾಹನಗಳನ್ನು ಕಾನೂನು ಬಾಹಿರ ಚಟುವಟಿಕೆಗೆ ಬಳಕೆ ಮಾಡುವುದನ್ನು ತಪ್ಪಿಸಲು ಹಾಗೂ ವಾಹನಗಳನ್ನು ಟ್ರಾಕ್‌ ಮಾಡಲು ಹೀಗೆ ಹಲವು ಕಾರಣಗಳಿಂದ HSRP ಅಗತ್ಯವಾಗಿದೆ.

 

ಇದೀಗ ಈ ಪ್ಲೇಟ್‌ ಪಡೆಯಲು ಸರಕಾರ ಮಾರ್ಗಸೂಚಿ ಹೊರಡಿಸಿದೆ.
2019ರ ಎಪ್ರಿಲ್‌ಗೂ ಮೊದಲು ರಿಜಿಸ್ಟ್ರೇಶನ್ ಆಗಿರುವ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ. 2019ರ ಎಪ್ರಿಲ್ ಬಳಿಕ ರಿಜಿಸ್ಟ್ರೇಶನ್ ಆಗಿರುವ ವಾಹನಗಳಿಗೆ ಹಾಕಲಾಗಿರುವ ನಂಬರ್ ಪ್ಲೇಟ್ HSRP ಆಗಿದೆ. ಹೀಗಾಗಿ ಯಾರ ವಾಹನ ಎಪ್ರಿಲ್ 2019ರ ಮೊದಲ ರಿಜಿಸ್ಟ್ರೇಶನ್ ಆಗಿದೆಯೋ ಆ ವಾಹನಗಳ ಮಾಲೀಕರು HSRP ನಂಬರ್ ಪ್ಲೇಟ್ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ವರದಿಯಾಗಿದೆ.

HSRP ಎಂದರೇನು? ಇದೊಂದು ವಾಹನಗಳ ನೋಂದಣಿ ನಂಬರ್‌ ಪ್ಲೇಟ್‌, ಅಲ್ಯೂಮಿನಿಯಂನಿಂದ ತಯಾರಿ ಮಾಡಲಾಗುತ್ತದೆ. ಲೇಸರ್‌ ಕೋಡ್‌ ಇದರಲ್ಲಿ ಇರಲಿದ್ದು, ಸ್ಕ್ಯಾನ್‌ ಮಾಡಿದಾಗ ವಾಹನದ ಕುರಿತ ಸಂಪೂರ್ಣ ಮಾಹಿತಿ ಅಶೋಕ ಚಕ್ರದ ಚಿತ್ರ ಇರುತ್ತದೆ.

ಈ ಪ್ಲೇಟ್‌ ಅಳವಡಿಸಿದ ನಂತರ ನಗದು ವ್ಯವಹಾರಕ್ಕೆ ಅವಕಾಶವಿಲ್ಲ. ಆನ್‌ಲೈನ್‌ ಮೂಲಕ ಮಾತ್ರ ಬುಕಿಂಗ್‌, ಪಾವತಿ ಮಾಡಲು ಸಾಧ್ಯ. ಇದನ್ನು ಹೆಚ್‌ಆರ್‌ಸಿಪಿ ನಂಬರ್‌ ಪ್ಲೇಟ್‌ ಬುಕ್‌ ಮಾಡುವ ವಿಧಾನ ಇಲ್ಲಿದೆ.

https://transport.karnataka.gov.in ಅಥವಾ www.siam.in ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು
Book HSRP ಕ್ಲಿಕ್ ಮಾಡಿ.
ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿ.
ನಿಮ್ಮ ವಾಹನದ ಮಾಹಿತಿಯನ್ನು ನಮೂದಿಸಿ.
ನಿಮ್ಮ ಹತ್ತಿರದ ಅಥವಾ ನಿಮ್ಮ ಡೀಲರ್ ಶೋ ರೂಂ ಆಯ್ಕೆ ಮಾಡಿ.
HSRP ನಂಬರ್ ಪ್ಲೇಟ್‌ಗೆ ಪಾವತಿ ಮಾಡಿ
ಮೊಬೈಲ್ ನಂಬರ್‌ಗೆ ಬರವು ಒಟಿಪಿಯನ್ನು ನಮೂದಿಸಿ
HSRP ನಂಬರ್ ಪ್ಲೇಟ್ ಅಳವಡಿಸಲು ನಿಮ್ಮ ಅನುಕೂಲದ ದಿನಾಂಕವನ್ನು ನಿಗದಿಪಡಿಸಿಕೊಂಡರೆ ಮುಗಿಯಿತು.

ನೀವು ಆನ್‌ಲೈನ್‌ ಮೂಲಕ HSRP ನಂಬರ್‌ ಪ್ಲೇಟ್‌ ಬುಕ್‌ ಮಾಡಿದ ಮೂರರಿಂದ ಒಂದು ವಾರದೊಳಗೆ ಹೊಸ ನಂಬರ್‌ ಪ್ಲೇಟ್‌ ನೀವು ಆಯ್ಕೆ ಮಾಡಿದ ಡೀಲರ್‌ ಬಳಿ ತಲುಪಲಿದೆ. ನಂತರ ನಿಗದಿಮಾಡಿದ ದಿನಾಂಕದಂದು ಡೀಲರ್‌ ಬಳಿ ಪಡೆದುಕೊಳ್ಳಬಹುದು.

ಪಾವತಿ ದರ; ದ್ವಿಚಕ್ರ ವಾಹನಗಳಿಗೆ ರೂ.400+ 100 ( ಕಲರ್‌ ಕೋಡ್‌ ಸ್ಟಿಕ್ಕರ್‌)
ಕಾರು ಸೇರಿ ನಾಲ್ಕು ಚಕ್ರದ ವಾಹನಗಳಿಗೆ 1,100 ರೂಪಾಯಿ (ಕಾರು ಇತರ ವಾಹನಗಳಿಗೆ ತಕ್ಕಂತೆ ಬದಲಾಗಲಿದೆ) + 100 (ಕಲರ್ ಕೋಡ್ ಸ್ಟಿಕ್ಕರ್)

 

Leave A Reply

Your email address will not be published.