KSRTC ಮಹಿಳಾ ಕಂಡಕ್ಟರ್‌ನಿಂದ ವಿದ್ಯಾರ್ಥಿನಿಗೆ ಕಪಾಳಮೋಕ್ಷ!!

Share the Article

ಭಾರತೀನಗರ (ಜ.11) : ಕೆ.ಎಂ.ದೊಡ್ಡಿಯಿಂದ ಮಂಡ್ಯಕ್ಕೆ ಚಲಿಸುತ್ತಿದ್ದ ಸಾರಿಗೆ ಬಸ್‌ನಲ್ಲಿ ವಿದ್ಯಾರ್ಥಿನಿ ಮಹಿಳಾ ಕಂಡಕ್ಟರ್‌ನನ್ನು ಅಜ್ಜಿ ಟಿಕೆಟ್ ಕೊಡಿ ಎಂದು ಕೇಳಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.

ಮಂಡ್ಯ ಡಿಪೋದ ಕೆಎ-40, ಎಫ್-1195 ಸಾರಿಗೆ ಬಸ್ ಭಾರತೀನಗರದಿಂದ ಮಂಡ್ಯಕ್ಕೆ ಚಲಿಸುತ್ತಿದ್ದ ವೇಳೆ 15 ವರ್ಷದ ವಿದ್ಯಾರ್ಥಿನಿ ಕಾವ್ಯಶ್ರೀ ಕಂಡಕ್ಟರ್ ಸೌಭಾಗ್ಯಮ್ಮರನ್ನು ಟಿಕೆಟ್ ಕೊಡಿ ಅಜ್ಜಿ ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ಕಂಡಕ್ಟರ್‌ ರಪ್ಪನೆಂದು ವಿದ್ಯಾರ್ಥಿನಿ ಕೆನ್ನೆಗೆ ಬಾರಿಸಿದ್ದಾರೆ ಎಂದು ಜನವಾಡಿ ಮಹಿಳಾ ಸಂಘಟನೆ ಅಧ್ಯಕ್ಷೆ ಡಿ.ಕೆ.ಲತಾ ತಿಳಿಸಿರುವ ಕುರಿತು ವರದಿಯಾಗಿದೆ.

ಈ ಘಟನೆಯ ನಂತರ ಕೆ.ಎಂ.ದೊಡ್ಡ ಪೊಲೀಸ್‌ ಠಾಣೆ ಮುಂದೆ ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳು ಕಂಡಕ್ಟರ್‌ ಸೌಭಾಗ್ಯ ವಿರುದ್ಧ ಪ್ರತಿಭಟನೆ ಮಾಡಿ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

 

 

 

Leave A Reply