Flipkart Republic Day Sale: ಮೊಬೈಲ್ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್; ಐಪೋನ್ 15 ಸೇರಿದಂತೆ ಈ ಎಲ್ಲ ಫೋನ್ಗಳ ಮೇಲೆ ಭಾರೀ ಡಿಸ್ಕೌಂಟ್!!

Flipkart Republic Day Sale: ಗಣರಾಜ್ಯೋತ್ಸವ ಪ್ರಯುಕ್ತ ಪ್ರಸಿದ್ದ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2024(Flipkart Republic Day Sale)ಅನ್ನು ಇದೇ ಜನವರಿ 14 ರಿಂದ ಪ್ರಾರಂಭಿಸಲಿದೆ. ಈ ಮಾರಾಟದಲ್ಲಿ ಐಫೋನ್ 15 ಸೇರಿದಂತೆ ಹಲವು ಫೋನ್‌ಗಳ ಮೇಲೆ ಬೊಂಬಾಟ್ ಡಿಸ್ಕೌಂಟ್ ಸಿಗಲಿದೆ.

 

ನೀವೇನಾದರೂ ಮೊಬೈಲ್ ಖರೀದಿ ಮಾಡುವ ಪ್ಲಾನ್ ಹಾಕಿಕೊಂಡಿದ್ದರೆ, ನಿಮಗೊಂದು ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ ನೋಡಿ!!ಫ್ಲಿಪ್‌ಕಾರ್ಟ್‌ ನೀಡಿರುವ ಮಾಹಿತಿಯ ಅನುಸಾರ, ಫ್ಲಿಪ್‌ಕಾರ್ಟ್‌ನ ರಿಪಬ್ಲಿಕ್ ಡೇ ಸೇಲ್ (Flipkart Republic Day Sale)ಜನವರಿ 14 ರಿಂದ ಪ್ರಾರಂಭವಾಗಲಿದೆ. ಪ್ರತಿ ಬಾರಿಯಂತೆ, ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಒಂದು ದಿನ ಮುಂಚಿತವಾಗಿ ಈ ಮಾರಾಟದ ಪ್ರಯೋಜನವನ್ನು ಪಡೆಯಬಹುದು. ಈ ಸೇಲ್ ಜನವರಿ 19 ರವರೆಗೂ ಮುಂದುವರೆಯಲಿದ್ದು, ಇಲ್ಲಿ ಐಫೋನ್ 15 ಸೇರಿದಂತೆ ಹಲವು ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.

ಈ ಫೋನ್‌ಗಳ ಮೇಲೆ ಸಿಗಲಿದೆ ಭಾರೀ ಡಿಸ್ಕೌಂಟ್:

ಐಫೋನ್ 15 ಫೋನ್‌ಗಳು ಈಗಾಗಲೇ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, iPhone 15 128GB ಸ್ಟೋರೇಜ್ ಮಾದರಿ ಅನ್ನು ಆರಂಭದಲ್ಲಿ ಭಾರತದಲ್ಲಿ 79,900 ರೂ. ಗಳಿಗೆ ಬಿಡುಗಡೆ ಮಾಡಲಾಗಿದೆ. ಆದರೆ, ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಗ್ರಾಹಕರಿಗೆ 6,901 ರೂ.ಗಳ ರಿಯಾಯಿತಿಯೊಂದಿಗೆ 72,999ರೂ.ಗಳಿಗೆ ಸಿಗಲಿದೆ. ಇದೀಗ ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಐಫೋನ್ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿ ಘೋಷಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: Killer CEO: ಬೆಂಗಳೂರಿನ ಹರಿಶ್ಚಂದ್ರಘಾಟ್‌ನಲ್ಲಿ ಸುಚನಾಳ 4 ವರ್ಷದ ಮಗುವಿನ ಅಂತ್ಯಕ್ರಿಯೆ!

ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ Apple ನ ಎಲ್ಲಾ iPhone 15, 14, 13, 12 ಮೇಲೆ ಭಾರೀ ಡಿಸ್ಕೌಂಟ್ ಲಭ್ಯವಾಗಲಿದೆ. ಇದರ ಜೊತೆಗೆ, Google Pixel 7a, Samsung Galaxy S21 FE 5G, Motorola Edge 40 Neo, Samsung Galaxy S22, Pixel 8, Vivo T2 Pro, Oppo Reno 10 Pro, Vivo T2x, Poco X5, Realme 11, Redmi 12, Samsung Galaxy F34 ಮತ್ತು Many4 ಫೋನ್‌ಗಳನ್ನು ಸಹ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಬಹುದು. ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಯಾವೆಲ್ಲಾ ಫೋನ್‌ಗಳ ಮೇಲೆ ಎಷ್ಟು ಡಿಸ್ಕೌಂಟ್ ಲಭ್ಯವಿರುತ್ತದೆ ಎಂಬ ಬಗ್ಗೆ ಫ್ಲಿಪ್‌ಕಾರ್ಟ್ ತನ್ನ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳಲ್ಲಿ ಯಾವುದೇ ಮಾಹಿತಿಯನ್ನು ಬಹಿರಂಗ ಮಾಡಿಲ್ಲ.

Leave A Reply

Your email address will not be published.