Belthangadi: ಕರುವಲ್ಲ ಕಲ್ಲುಗುಂಡ ದೈವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ!ಬೆಳ್ತಂಗಡಿಯಲ್ಲಿ ಕಳ್ಳತನ ಪ್ರಕರಣ ದಾಖಲು!!

Belthangadi : ಇಂದಬೆಟ್ಟು ಕರುವಲ್ಲ ಕಲ್ಲಗುಂಡ ದೇವಸ್ಥಾನದ ಪಡಂಬಿಲ ಪೂಪಾಡಿಕಲ್ಲು ಸಮಿಪದ ಬಂಗಾಡಿ ಹಾಡಿ ದೈವ ಕ್ಷೇತ್ರ ಕುತ್ರಬೆಟ್ಟು ದ್ವಾರದ ಬಳಿ ಇದ್ದಂತಹ ಕಾಣಿಕೆ ಡಬ್ಬಿಯ ಹಣವನ್ನು ಕಿಡಿಗೇಡಿಗಳು ಅಪಹರಿಸಿ(Fraud)ಪರಾರಿಯಾಗಿರುವ ಘಟನೆ ಜ.9 ರಂದು ರಾತ್ರಿ ನಡೆದಿದೆ ಎಂದು ವರದಿಯಾಗಿದೆ.

 

ಬೆಳ್ತಂಗಡಿ(Belthangadi)ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ಕಾಣಿಕೆ ಡಬ್ಬಿಯ ಬೀಗ ಮುರಿದು ಅದರಲ್ಲಿದ್ದ ಅಂದಾಜು ರೂ.6000 ಹಣವನ್ನು ಕಳ್ಳತನ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಪೊಲೀಸರು ತನಿಖೆಯ ಬಳಿಕವೇ ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದೆ

Leave A Reply

Your email address will not be published.