Vijayapura: KSRTC ಬಸ್ ಅಡಿಗೆ ಹಾರಿ ಯುವಕ ಆತ್ಮಹತ್ಯೆ- ಯಪ್ಪಾ.. ನಡುಕ ಹುಟ್ಟಿಸುತ್ತೆ ಸಿಸಿಟಿವಿ ದೃಶ್ಯ

Vijayapura: ಮೊನ್ನೆ ತಾನೆ ಬೆಂಗಳೂರಲ್ಲಿ ಮೆಟ್ರೋ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಲು ವ್ಯಕ್ತಿಯೊಬ್ಬರು ಟ್ರ್ಯಾಕ್ ಗೆ ಹಾರಿದ ಭಯಾನಕ ವಿಚಾರದ ಬಗ್ಗೆ ನಾವು ಕೇಳಿದ್ದೆವು. ಆದರೀಗ ಈ ಬೆನ್ನಲ್ಲೇ KSRTC ಬಸ್ ಕೆಳಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ(Vijayapura)ದಲ್ಲಿ ನಡೆದಿದೆ.

 

ಹೌದು, ಹಾಸನ(Hassan) ಮೂಲದ ಯುವಕನೊಬ್ಬ ಚಲಿಸುತ್ತಿದ್ದ ಸರ್ಕಾರಿ ಬಸ್ಸಿನ ಚಕ್ರದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬೆಚ್ಚಿಬೀಳಿಸುವ ಘಟನೆ ವಿಜಯಪುರ ನಗರದ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ನಡೆದಿದೆ. ಸ್ಥಳಕ್ಕೆ ಗಾಂಧಿಚೌಕ್ ಪೊಲೀಸರು ಆಗಮಿಸಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸರ್ಕಾರಿ ಬಸ್ ಸಮೀಪಕ್ಕೆ ಬರುತ್ತಿದ್ದ ಮೊಬೈಲ್ ಎಸೆದು ಚಕ್ರದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಾಣಬಹುದು. ಬಸ್ ಚಕ್ರದ ಕೆಳಗೆ ಯುವಕನು ಸಿಲುಕುತ್ತಿದ್ದಂತೆ ಆತನ ಇಡೀ ದೇಹವೇ ರಕ್ತಸಿಕ್ತವಾಗಿದೆ. ಸ್ಥಳದಲ್ಲೇ ಆತ ಪ್ರಾಣಬಿಟ್ಟಿದ್ದಾನೆ. ಇದನ್ನು ಕಂಡು ಸ್ಥಳೀಯರೇ ಬೆಚ್ಚಿಬಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

Leave A Reply

Your email address will not be published.