Annapoorani: ಬಹುಭಾಷಾ ನಟಿ ನಯನತಾರ ನಟನೆಯ ‘ಅನ್ನಪೂರ್ಣಿ’ ತಂಡಕ್ಕೆ ಸಂಕಷ್ಟ: ರಾಮನನ್ನು ಮಾಂಸಹಾರಿ ಎಂದು ಬಿಂಬಿಸಿದ ಆರೋಪ: ಚಿತ್ರತಂಡದ ವಿರುದ್ದ FIR ದಾಖಲು!!

Share the Article

Annapoorani: ಬಹುಭಾಷಾ ನಟಿ ನಯನತಾರಾ ನಟನೆಯ 75ನೇ ಸಿನಿಮಾದ (Nayanthara 75th Movie) ‘ಅನ್ನಪೂರ್ಣಿ’ (Annapoorani) ಚಿತ್ರ ರಿಲೀಸ್ ಆಗಿ ಇದೀಗ ಓಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿರುವುದು ಗೊತ್ತಿರುವ ಸಂಗತಿ. ಇದೀಗ, ಈ ಸಿನಿಮಾ ತಂಡಕ್ಕೆ ಸಂಕಷ್ಟ ಎದುರಾಗಿದೆ. ಈ ಚಿತ್ರತಂಡದ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇರೆಗೆ ದೂರು ದಾಖಲಾಗಿದೆ.

ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇರೆಗೆ ʼಅನ್ನಪೂರ್ಣಿʼ ಸಿನಿಮಾದ ನಿರ್ಮಾಪಕರ ವಿರುದ್ಧ ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ಪೊಲೀಸ್ ದೂರು ನೀಡಿದ್ದಾರೆ. ನಿರ್ಮಾಪಕರು ರಾಮನನ್ನು ಮಾಂಸಹಾರಿ ಎಂದು ಬಿಂಬಿಸಿದ್ದು, ರಾಮನನ್ನು ಅವಮಾನಿಸಲಾಗಿದೆ. ಇದರ ಜೊತೆಗೆ ಈ ಚಿತ್ರದಲ್ಲಿ ಲವ್ ಜಿಹಾದ್ ಅನ್ನು ಬೆಂಬಲಿಸುವ ಉತ್ತೇಜಿಸುವ ದೃಶ್ಯಗಳಿವೆ ಎಂದು ಹಿಂದಿ ಐಟಿ ಸೆಲ್‌ನ ಸಂಸ್ಥಾಪಕರೂ ಆಗಿರುವ ಸೋಲಂಕಿ ಆರೋಪಿಸಿದ್ದಾರೆ.

ಇದನ್ನೂ ಓದಿ: Suchana Seth Arrest: ಗೋವಾ ಹೋಟೆಲ್‌ನಲ್ಲಿ ಮಗು ಹತ್ಯೆ ಮಾಡಿದ ಸ್ಟಾರ್ಟ್‌ ಅಪ್‌ ಫೌಂಡರ್ &‌ ಸಿಇಒ!! ಸೂಟ್‌ಕೇಸ್‌ನಲ್ಲಿ ಶವ ಸಾಗಿಸುವಾಗ ಸುಚನಾ ಅರೆಸ್ಟ್‌!!!

ʼಅನ್ನಪೂರ್ಣಿʼ ಚಿತ್ರದ ನಿರ್ದೇಶಕ ನೀಲೇಶ್ ಕೃಷ್ಣ, ನಟಿ ನಯನತಾರಾ, ನಿರ್ಮಾಪಕರಾದ ಜತಿನ್ ಸೇಥಿ, ಆರ್ ರವೀಂದ್ರನ್ ಮತ್ತು ಪುನಿತ್ ಗೋಯೆಂಕಾ, ಝೀ ಸ್ಟುಡಿಯೋಸ್‌ನ ಮುಖ್ಯ ವ್ಯವಹಾರ ಅಧಿಕಾರಿ ಶಾರಿಕ್ ಪಟೇಲ್ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾ ಹೆಡ್ ಮೋನಿಕಾ ಶೆರ್ಗಿಲ್ ವಿರುದ್ಧ ಎಫ್‌ಐಆರ್ (FIR)ದಾಖಲಿಸಿದ್ದಾರೆ.

Leave A Reply