Home Interesting Ayodhya ರಾಮ ಲಲ್ಲಾ ವಿಗ್ರಹದ ಪುರ ಮೆರವಣಿಗೆ ರದ್ದು: ಟ್ರಸ್ಟ್ ಹೇಳಿದ್ದೇನು??

Ayodhya ರಾಮ ಲಲ್ಲಾ ವಿಗ್ರಹದ ಪುರ ಮೆರವಣಿಗೆ ರದ್ದು: ಟ್ರಸ್ಟ್ ಹೇಳಿದ್ದೇನು??

Ayodhya

Hindu neighbor gifts plot of land

Hindu neighbour gifts land to Muslim journalist

Ram Lalla Idol: ಅಯೋಧ್ಯೆಯಲ್ಲಿ (Ayodhya)ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ವಿಗ್ರಹ (Ram Lalla Idol)ಪ್ರತಿಷ್ಠಾಪನೆಯ ಮೊದಲು ಜನವರಿ 17ರಂದು ಹಮ್ಮಿಕೊಂಡಿದ್ದ ರಾಮಲಲ್ಲಾ ವಿಗ್ರಹ ಪುರ ಮೆರವಣಿಗೆಯನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರದ್ದು ಮಾಡಿರುವ ಕುರಿತು ಮಾಹಿತಿ ನೀಡಿದೆ.

ಇದನ್ನೂ ಓದಿ: Jharkhand News: ರಾಮಮಂದಿರ ಉದ್ಘಾಟನೆ; ಬರೋಬ್ಬರಿ 30 ವರ್ಷಗಳ ನಂತರ ಮೌನ ವೃತ ಮುರಿಯಲಿರುವ 85 ವರ್ಷದ ಮಹಿಳೆ!

ಅಯೋಧ್ಯೆ ಜಿಲ್ಲಾಡಳಿತ ನೀಡಿದ ಮಾಹಿತಿ ಅನುಸಾರ, ನೂತನ ರಾಮಲಲ್ಲಾ ವಿಗ್ರಹವನ್ನು ಪುರ ಮೆರವಣಿಗೆಗೆ ತಂದರೆ ಈ ಸಂದರ್ಭದಲ್ಲಿ ಭಾರೀ ಪ್ರಮಾಣದ ಭಕ್ತರು ಮತ್ತು ಯಾತ್ರಾರ್ಥಿಗಳು ಸೇರಲಿದ್ದಾರೆ. ರಾಮಲಲ್ಲಾ ವಿಗ್ರಹದ ಛಾಯಾಚಿತ್ರ ಸೆರೆ ಹಿಡಿಯಲು ಮುಂದಾಗುವುದರಿಂದ ಜನದಟ್ಟಣೆ ಸಂಭವಿಸಬಹುದು ಎಂದು ಟ್ರಸ್ಟ್‌ ಹೇಳಿದೆ. ಹೀಗಾಗಿ, ಅಪಾರ ಪ್ರಮಾಣದ ಭಕ್ತರನ್ನು ನಿಯಂತ್ರಿಸುವುದು ಮತ್ತು ಭದ್ರತೆಯ ಕಾರಣದಿಂದ ಪುರ ಮೆರವಣಿಗೆ ರದ್ದುಗೊಳಿಸುವ ತೀರ್ಮಾನ ತೆಗೆದುಕೊಂಡಿರುವುದಾಗಿ ಟ್ರಸ್ಟ್ ತಿಳಿಸಿದೆ.ಪುರ ಮೆರವಣಿಗೆ ರದ್ದಗೊಂಡಿದ್ದರೂ ಕೂಡ ಜನವರಿ 17ರಂದು ರಾಮ ಜನ್ಮಭೂಮಿ ಆವರಣದಲ್ಲಿ ನೂತನ ವಿಗ್ರಹದ ಮೆರವಣಿಗೆ ನಡೆಸಲು ಟ್ರಸ್ಟ್‌ ಸಿದ್ಧತೆ ನಡೆಸಿದೆ ಎಂದು ಮಾಹಿತಿ ನೀಡಿದೆ.