

maldives and lakshadweep: ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ(PM Modi)ಯವರು ಲಕ್ಷದ್ವೀಪಕ್ಕೆ ನೀಡಿದ ಭೇಟಿ ಭಾರೀ ಸಂಚಲನ ಸೃಷ್ಟಿಸಿದೆ. ಬಹುಶಃ ತಮ್ಮ ಈ ಒಂದು ಭೇಟಿ ಇಷ್ಟರಮಟ್ಟಿಗೆ ಸದ್ದು ಮಾಡುತ್ತದೆ ಎಂಬುದು ಸ್ವತಃ ಮೋದಿಯವರಿಗೂ ತಿಳಿದಿರಲಿಕ್ಕಿಲ್ಲ. ಮೋದಿ ತಮ್ಮ ಲಕ್ಷದ್ವೀಪದ ಫೋಟೋ ಹಂಚಿಕೊಂಡದ್ದು ಒಂದು ದೇಶದ ಅರ್ಥಿಕ ಸ್ಥಿತಿಗತಿಯನ್ನೇ ದಿವಾಳಿ ಮಾಡುವಷ್ಟರಮಟ್ಟಿಗೆ ಫೇಮಸ್ ಆಗಿಬಿಟ್ಟಿವೆ.
ಮೋದಿ ತಾವು ಭೇಟಿ ನೀಡಿದ ಲಕ್ಷದ್ವೀಪ ಕಡಲ ಕಿನಾರೆ ಸೌಂದರ್ಯದ ಫೋಟೋಗಳು ಅಲ್ಲಿಗೆ ಹೋಗಲೇ ಬೇಕೆಂದು ಮಾತ್ರ ಭಾರತೀಯರು ಯೋಚಿಸಿದ್ದಲ್ಲ, ಸದಾ ಚೀನಾ ಬೆಂಬಲವಾಗಿ ನಿಲ್ಲುವ ಮಾಲ್ಡೀವ್ಸ್ ಆರ್ಥಿಕತೆಯನ್ನು ಬುಡ ಮೇಲು ಮಾಡುವಂತಾಗಿದೆ. ಈ ಫೋಟೋಗಳು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ ಮೋದಿಯ ಈ ಭೇಟಿಯಿಂದಾಗಿ ಮಾಲ್ಡೀವ್ಸ್ ಸರ್ಕಾರಕ್ಕೆ ನಡುಕ ಶುರುವಾಗಿಬಿಟ್ಟಿದೆ. ಮೋದಿಯ ಫೋಟೋಗಳಿಂದ ಮಾಲ್ಡೀವ್ಸ್ ಗೆ ಆದ ನಷ್ಟದ ಬಗ್ಗೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ!!
ಹೌದು, ಭಾರತ ಹಾಗೂ ಭಾರತದ ಪ್ರದಾನಿಗಳ ಬಗ್ಗೆ ಮಾಲ್ಡೀವ್ಸ್ ಸಚಿವರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಂತೆ ನಂತರ #BoycottMaldives ಟ್ರೆಂಡಿಂಗ್ ಶುರುವಾಗಿದೆ. ಮಾಲ್ಡೀವ್ಸ್ ಮತ್ತು ಲಕ್ಷದ್ವೀಪಕ್ಕೆ(maldives and lakshadweep) ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. ಇದರ ಜತೆಗೆ ಲಕ್ಷಾಂತರ ಜನರು ಲಕ್ಷದ್ವೀಪದ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದರೆ, ಸಾವಿರಾರು ಜನರು ಮಾಲ್ಡೀವ್ಸ್ ಪ್ರವಾಸವನ್ನೇ ಕೈಬಿಟ್ಟಿದ್ದಾರೆ. ಇವೆಲ್ಲ ಕ್ರಿಯೆ, ಪ್ರತಿಕ್ರಿಯೆಗಳಲ್ಲಿ ಮೋದಿಯನ್ನು ಕನಸಿನಲ್ಲೂ ಟೀಕಿಸುವರಿಗೆ ಉತ್ತರ ದೊರೆತಿದೆ.
ಅಂದಹಾಗೆ ಮಾಲ್ಡೀವ್ಸ್‌ನ ಆರ್ಥಿಕತೆ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಮಾಲ್ಡೀವ್ಸ್‌ನ ಆರ್ಥಿಕತೆಯಲ್ಲಿ ಪ್ರವಾಸೋದ್ಯಮದ ಪಾಲು ಶೇ.28 ರಷ್ಟಿದ್ದರೆ, ಪ್ರವಾಸೋದ್ಯಮವು ವಿದೇಶಿ ವಿನಿಮಯದಲ್ಲಿ ಶೇ.60 ರಷ್ಟು ಕೊಡುಗೆ ನೀಡುತ್ತದೆ. ಹಿಂದೂ ಮಹಾಸಾಗರದಲ್ಲಿರುವ ಈ ದ್ವೀಪ ರಾಷ್ಟ್ರ ಅತ್ಯಂತ ದೊಡ್ಡ ಹಾಲಿಡೇ ತಾಣ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಸಾಮಾನ್ಯ ಜನರಿಂದ ಹಿಡಿದು ವಿಶೇಷ ಸೆಲೆಬ್ರಿಟಿಗಳು ಕೂಡ ಮಾಲ್ಡೀವ್ಸ್‌ಗೆ ರಜೆಗಾಗಿ ಬರುತ್ತಾರೆ.
ಅಂಕಿ-ಅಂಶಗಳ ಪ್ರಕಾರ ಮಾಲ್ಡೀವ್ಸ್‌ಗೆ ಬರುವ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭಾರತೀಯರು. 2023ರಲ್ಲಿ 2,09,198 ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ತಲುಪಿದ್ದಾರೆ. 2022 ರಲ್ಲಿ 2,40,000 ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಇದು ಮಾಲ್ಡೀವ್ಸ್‌ನ ಮಾರುಕಟ್ಟೆ ಪಾಲಿನ 14 ಪ್ರತಿಶತವಾಗಿತ್ತು. ಭಾರತ ಬಿಟ್ಟರೆ ರಷ್ಯಾ ಮತ್ತು ಚೀನಾದ ಪ್ರವಾಸಿಗರು ಅಲ್ಲಿಗೆ ಬರುತ್ತಾರೆ. 2020ರಲ್ಲಿ ಕರೋನಾ ಸಮಯದಲ್ಲಿ ಭಾರತವು ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ 11 ಪ್ರತಿಶತದಷ್ಟು ಕೊಡುಗೆ ನೀಡಿದೆ. ಆದರಿನ್ನು ಭಾರತೀಯರು ಮಾಲ್ಡೀವ್ಸ್ ಬಿಟ್ಟು ಲಕ್ಷದ್ವೀಪದತ್ತ ಮುಖ ಮಾಡಿದರೆ ಮಾಲ್ಡೀವ್ಸ್ ಖೆ ಆಗುವ ನಷ್ಟವನ್ನು ಊಹಿಸಲೂ ಸಾಧ್ಯವಿಲ್ಲ. ಪ್ರಧಾನಿ ಮೋದಿಯವರ ಈ ಉಪಕ್ರಮವು ಮಾಲ್ಡೀವ್ಸ್‌ನ ಆರ್ಥಿಕತೆಗೆ ನೇರ ಹೊಡೆತ ಕೊಡಲಿದೆ. ಇತರ ದೇಶಗಳ ಪ್ರವಾಸಿಗರು ಕೂಡ ಮಾಲ್ಡೀವ್ಸ್ ಬಿಟ್ಟು ಲಕ್ಷದ್ವೀಪದ ಕಡೆಗೆ ಮುಖಮಾಡಬಹುದು ಎಂಬ ಆತಂಕವೂ ಇದೆ.
ಇದನ್ನೂ ಓದಿ: Hair care: ಮಹಿಳೆಯರೇ.. ಹೆಚ್ಚಾಗಿ ತುರುಬು ಕಟ್ಟುತ್ತೀರಾ?! ಇದು ಏನೆಲ್ಲಾ ಸಮಸ್ಯೆ ತಂದೊಡ್ಡುತ್ತೆ ಗೊತ್ತಾ ?!
ಕಳೆದ ಚುನಾವಣೆಯ ಸಂದರ್ಭದಲ್ಲಿ ಬಂಡೀಪುರ ಅಭಯಾರಣ್ಯಕ್ಕೆ ಪ್ರಧಾನಿ ಭೇಟಿ ಕೊಟ್ಟಿದ್ದರು. ಕಳೆದ ವಾರ ನಾನು ಓದಿದ ಮಾಧ್ಯಮ ವರದಿ ಪ್ರಕಾರ, ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಆದಾಯ ದುಪ್ಪಟ್ಟಾಗಿದೆಯಂತೆ. ಈಗ ಲಕ್ಷದ್ವೀಪದ ಬಗೆಗೂ ಇದೇ ರೀತಿಯ ಬೆಳವಣಿಗೆಯಾಗುತ್ತಿದೆ. ಯಾವುದೇ ಒಂದು ದೇಶ, ಪ್ರವಾಸಿ ತಾಣವು ಹಾಗೇ ಸುಮ್ಮನೇ ಬ್ರಾಂಡ್ ಆಗುವುದಿಲ್ಲ. ಆ ದೇಶವು ಪ್ರೀತಿಸುವ ಜನರು ಹಾಗೂ ಇತರರು ತಮ್ಮ ದೇಶದ ನೆಲವನ್ನು ಅಷ್ಟು ಸುಂದರವಾಗಿ ಇತರರಿಗೆ ಪರಿಚಯಿಸಿದಾಗ ಮಾತ್ರ ಅದು ಸಾಧ್ಯ. ಆ ಕೆಲಸವನ್ನು ಪ್ರಧಾನಿ ಮೋದಿ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.













