School Children Bag: ಶಾಲಾ ಮಕ್ಕಳ ʼಬ್ಯಾಗ್‌ʼ ಹೊರೆ ಇಳಿಸಲು ಶಿಕ್ಷಣ ಇಲಾಖೆಯಿಂದ ಮಹತ್ವದ ನಿರ್ಧಾರ!

School Children Bags: ಶಾಲಾ ಮಕ್ಕಳ ಶಾಲಾ ಬ್ಯಾಗ್(School Children Bags) ಹೊರೆ ಇಳಿಸಲು ‘ಶಿಕ್ಷಣ ಇಲಾಖೆ’ (Education Department)ಮಹತ್ವದ ತೀರ್ಮಾನ ಕೈಗೊಂಡಿದೆ.

ಶಾಲಾ ಮಕ್ಕಳ ಶಾಲಾ ಬ್ಯಾಗ್(School Children Bags) ಹೊರೆ ಇಳಿಸಲು ‘ಶಿಕ್ಷಣ ಇಲಾಖೆ’ ಮುಂದಾಗಿದ್ದು, ಈ ನಿಟ್ಟಿನಲ್ಲಿ ಪಠ್ಯ ಪುಸ್ತಕವನ್ನು ಭಾಗ-1, ಭಾಗ-2 ವಿಭಾಗಗಳಾಗಿ ವಿಂಗಡಿಸಲು ಚಿಂತನೆ ನಡೆಸಿದೆ. ಹೀಗಾಗಿ, ಎಸ್ಎ-1 ಹಾಗೂ ಎಸ್‌ಎ-2ಗಳಾಗಿ ವಿಂಗಡಿಸಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: Hit And Run Law: ಹಿಟ್‌ ಆಂಡ್‌ ರನ್‌ ಕಠಿಣ ಕಾನೂನು ಕುರಿತು ಕೇಂದ್ರದಿಂದ ಮಹತ್ವದ ಆದೇಶ ಜಾರಿ!!

ಸರ್ಕಾರ ಅರ್ಧವಾರ್ಷಿಕ ಪರೀಕ್ಷೆ ವರೆಗೆ ಭಾಗ-1 ಮತ್ತು ದಸರಾ ರಜೆ ಮುಗಿದ ನಂತರ ಭಾಗ-2 ಪಠ್ಯಪುಸ್ತಕಗಳನ್ನು ಶಾಲೆಗೆ ತರಿಸುವ ಯೋಜನೆ ಹಾಕಿಕೊಂಡಿದೆ. ಇದರ ಜೊತೆಗೆ ಹೆಚ್ಚುವರಿ ಮಕ್ಕಳ ನೋಟ್ ಪುಸ್ತಕಗಳು ಶಾಲೆಯಲ್ಲೇ ಇರಿಸಲು ಕೂಡ ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

Leave A Reply

Your email address will not be published.