School Closed: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; 8 ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಜ.14 ರವರೆಗೆ ರಜೆ!!!

School Closed: ಶಾಲಾ ಮಕ್ಕಳಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ!!ಇಂದಿನಿಂದ ಜನವರಿ 14ರವರೆಗೆ 8ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ರಜೆ ಘೋಷಣೆ (School Closed)ಮಾಡಲಾಗಿದೆ.

 

ಚಳಿಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ, ಕೆಲವು ರಾಜ್ಯಗಳು ಶಾಲೆಗಳಿಗೆ ರಜೆಯನ್ನು (School Holiday) ಘೋಷಿಸಿದೆ.ಉತ್ತರ ಭಾರತದಲ್ಲಿ ಚಳಿಯ ತೀವ್ರತೆ (Winter Vacation for Schools)ಪ್ರತಿದಿನ ಹೆಚ್ಚುತ್ತಿರುವ ಹಿನ್ನೆಲೆ ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಖಾಸಗಿ ಮತ್ತು ಸರ್ಕಾರಿ ಶಾಲೆಗಳನ್ನು ಮುಚ್ಚಲು ತೀರ್ಮಾನ ಕೈಗೊಂಡಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರ ಮಕ್ಕಳಿಗೆ ರಜೆ ಘೋಷಣೆ ಮಾಡಿ ಆದೇಶವನ್ನೂ ಹೊರಡಿಸಿದೆ.

 

ರಾಜಸ್ಥಾನ ಸರ್ಕಾರ ಚಳಿಯ ವಾತಾವರಣದ ಮುಂದುವರಿದ ಹಿನ್ನೆಲೆ ರಾಜಸ್ಥಾನದ ಶಾಲೆಗಳಿಗೆ ರಜೆಯನ್ನು ವಿಸ್ತರಣೆ ಮಾಡಿದ್ದು, ಸರ್ಕಾರೇತರ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ 8 ನೇ ತರಗತಿಯವರೆಗೆ ಜನವರಿ 13, 2024 ರವರೆಗೆ ಶಾಲೆಗಳು ಮುಚ್ಚಲಿದೆ. ಇದು ರಾಜಸ್ಥಾನದ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಅನ್ವಯವಾಗಲಿದೆ. ಹರಿಯಾಣದಲ್ಲಿ ಜನವರಿ 1, 2024 ರಿಂದ ಜನವರಿ 15, 2024 ರ ತನಕ ಚಳಿಗಾಲದ ರಜೆಯನ್ನು ಘೋಷಿಸಲಾಗಿದೆ.

 

ಉತ್ತರ ಪ್ರದೇಶದ ನೋಯ್ಡಾದಲ್ಲಿ ತೀವ್ರವಾದ ಚಳಿಯ ವಾತಾವರಣ ಕಳೆದ ಕೆಲವು ದಿನಗಳಿಂದ ಮುಂದುವರಿಯುತ್ತಿರುವ ಹಿನ್ನೆಲೆ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ 8 ನೇ ತರಗತಿ ತನಕದ ಶಾಲೆಗಳನ್ನು ಜನವರಿ 14, 2024 ರವರೆಗೆ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿನ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಮಾತ್ರ ರಜೆ ಘೋಷಣೆ ಅನ್ವಯವಾಗಲಿದೆ.

Leave A Reply

Your email address will not be published.