Jahnvi kapoor: ನಿಮ್ಮ ದೇಹದಲ್ಲಿ ಎಷ್ಟು ಸೌಂದರ್ಯದ ತಾಣಗಳಿವೆ ?! ಯಪ್ಪಾ.. ಕರಣ್ ಜೋಹರ್ ಪ್ರಶ್ನೆಗೆ ಜಾಹ್ನವಿ ಹೀಗಾ ಉತ್ತರಿಸೋದು ?!

Jahnvi kapoor: ಕರಣ್ ಜೋಹರ್ ನಡೆಸುವ ‘ಕಾಫಿ ವಿತ್ ಕರಣ್'(Coffee with karan) ಬಾಲಿವುಡ್ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ಒಂದು ಶೋ ಪ್ರೋಗ್ರಾಮ್. ಇಲ್ಲಿ ನಟ, ನಟಿಯರಿಗೆ ನೇರವಾಗಿ ತೀರಾ ಖಾಸಗಿ ಹಾಗೂ ವೈಯಕ್ತಿಕ ವಿಷಯಗಳನ್ನು, ಬೋಲ್ಡ್ ಆದ ಪ್ರಶ್ನೆಗಳನ್ನು, ಲೈಂಗಿಕ ವಿಚಾರಗಳನ್ನು ಕೇಳಲಾಗುತ್ತದೆ. ಕೆಲವೊಮ್ಮೆ ಇಲ್ಲಿ ಸೆಲೆಬ್ರಿಟಿಗಳು ನೀಡೋ ಉತ್ತರ ಸಾಕಷ್ಟು ಟ್ರೋಲ್, ವೈರಲ್ ಆಗುವುದುಂಟು. ಅಂತೆಯೇ ಇದೀಗ ಖ್ಯಾತ ನಟಿ ಜಾಹ್ನವಿ ಕಪೂರ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಕರಣ್ ಪ್ರಶ್ನೆಗೆ ಅವರು ನೀಡಿದ ಉತ್ತರಗಳು ಸಾಕಷ್ಟು ವೈರಲ್ ಆಗುತ್ತಿದೆ.

 

ಹೌದು, ಕಾಫಿ ವಿತ್​ ಕರಣ್​ (Koffee With Karan) ಮುಂಬರುವ ಸಂಚಿಕೆಯಲ್ಲಿ ನಟಿ ಶ್ರೀದೇವಿಯವರ ಪುತ್ರಿಯರಾದ ಖುದ್ದು ನಟಿಯರಾದ ಜಾಹ್ನವಿ ಕಪೂರ್‌ ( Janhvi Kapoor) ಮತ್ತು ಖುಷಿ ಕಪೂರ್ (Khushi Kapoor) ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಇದರ ಪ್ರೋಮೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಕೆಲವು ತರಲೆಯ ಪ್ರಶ್ನೆಗಳನ್ನು ಕರಣ್ ಅವರು ಜಾಹ್ನವಿಗೆ ಕೇಳಿದ್ದು, ಅದಕ್ಕೆ ಅಷ್ಟೇ ತರಲೆಯಾಗಿ ಜಾಹ್ನವಿ ಉತ್ತರಿಸಿದ್ದಾರೆ. ಸದ್ಯ ಕೆಲವು ಪ್ರಶ್ನೆಗಳು ಪ್ರೋಮೊದಲ್ಲಿ ಕಂಡುಬಂದಿದ್ದು, ಸಾಕಷ್ಟು ಸುದ್ಧಿಯಾಗುತ್ತಿದೆ.

ಅಂದಹಾಗೆ ಕೆಲವು ಬೋಲ್ಡ್ ಪ್ರಶ್ನೆಗಳನ್ನು ಕೇಳುವಾಗ ಕರಣ್ ಅವರು ಜಾಹ್ನವಿ ಹತ್ತಿರ ನಿಮಗೆ ಅಭಿಮಾನಿಗಳಿಂದ ಏನಾದರೂ ಕೆಟ್ಟ ಸಂದೇಶಗಳು ಬಂದಿತ್ತಾ ಎಂದು ಪ್ರಶ್ನಿಸಿದರು. ಅದಕ್ಕೆ ಜಾಹ್ನವಿ, ಆ ರೀತಿ ಬರುತ್ತಲೇ ಇರುತ್ತದೆ. ಆದರೆ ಬಾಲಿವುಡ್​ನ ಓರ್ವ ನಟನಿಂದ ಬಂದಿರುವ ಸಂದೇಶ ಮಾತ್ರ ಬಹಳ ವಿಚಿತ್ರವಾಗಿತ್ತು, ಆ ನಟ ನನಗೆ ನಿಮ್ಮ ಬಾಡಿಯಲ್ಲಿರುವ ಎಲ್ಲಾ ಸೌಂದರ್ಯದ ತಾಣಗಳನ್ನು ನೋಡಬೇಕು ಎಂದು ಕೇಳಿ ಮೆಸೇಜ್​ ಕಳುಹಿಸಿದ್ದ ಎಂದಿದ್ದಾರೆ. ಇದನ್ನು ಕೇಳಿ ಕರಣ್​ ಜೋಹರ್​ ಬಿದ್ದೂ ಬಿದ್ದೂ ನಕ್ಕಿದ್ದಲ್ಲದೆ ಆ ನಟನ ಸೌಂದರ್ಯದ ತಾಣಗಳೆಲ್ಲಾ ನಿಮ್ಮ ಬಾಡಿಯಲ್ಲಿ ಇವೆಯೇ ಎಂದು ಪ್ರಶ್ನಿಸಿದ್ದಾರೆ. ನಂತರ ಹಾಗಾದರೆ ನಿಮ್ಮ ದೇಹದಲ್ಲಿ ಎಷ್ಟು ಸೌಂದರ್ಯದ ತಾಣಗಳಿವೆ, ನಮಗೂ ಸ್ವಲ್ಪ ಗೊತ್ತಾಗಲಿ ಎಂದರು. ಆಗ ಜಾಹ್ನವಿ ಯಾವುದೇ ಅಳುಕು ಇಲ್ಲದೇ ನಗುತ್ತಲೇ ನನ್ನ ಬಾಡಿಯಲ್ಲಿ ತುಂಬಾ ಸೌಂದರ್ಯದ ತಾಣಗಳಿವೆ ಎಂದು ಕರಣ್​ ಜೋಹರ್​ ಅವರ ಬಾಯಿ ಮುಚ್ಚಿಸಿದರು.

Leave A Reply

Your email address will not be published.