Heart Attack; ಮೂಡಬಿದಿರೆ; ಮನೆಯಿಂದ ಪಂಚಾಯತ್‌ಗೆ ನಡೆದುಕೊಂಡು ಹೋಗುವಾಗ ಸಿಬ್ಬಂದಿಗೆ ಹಠಾತ್‌ ಹೃದಯಾಘಾತ! ಸಿಬ್ಬಂದಿ ನಿಧನ!!

Heart Attack: ಕರ್ತವ್ಯಕ್ಕೆ ಹಾಜರಾಗಲು ಪಂಚಾಯತ್‌ ಕಚೇರಿಯತ್ತ ನಡೆದುಕೊಂಡು ಬರುತ್ತಿದ್ದ ವೇಳೆ ಗ್ರಾ.ಪಂ ಸಿಬ್ಬಂದಿಯೋರ್ವರು ಹೃದಯಾಘಾತಕ್ಕೊಳಗಾದ (Heart Attack) ಘಟನೆಯೊಂದು ನಡೆದಿದೆ ಎಂದು ವರದಿಯಾಗಿದೆ.

 

ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೂಡಬಿದಿರೆ ಸಮೀಪದ ಕಲ್ಲಮುಂಡ್ಕೂರು ಎಂಬಲ್ಲಿ ಶನಿವಾರ ಈ ಘಟನೆ ನಡೆದಿದೆ.

ಕಲ್ಲಮುಂಡ್ಕೂರು ಗ್ರಾ.ಪಂ. ಸಿಬ್ಬಂದಿ ಚಂದ್ರಹಾಸ (29) ಎಂಬುವವರೇ ಮೃತ ಹೊಂದಿದವರು.

ಇದನ್ನೂ ಓದಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ; ಪ್ರಾಯೋಗಿಕ ಪರೀಕ್ಷೆಗಳ ದಿನಾಂಕ ಬದಲು,ಇಲ್ಲಿದೆ ಹೆಚ್ಚಿನ ಮಾಹಿತಿ!!

ತನ್ನ ಮನೆಯಿಂದ ನೂರು ಮೀಟರ್‌ ದೂರದಲ್ಲಿ ಕುಸಿದು ಬಿದ್ದ ಚಂದ್ರಹಾಸ ಅವರನ್ನು ಕೂಡಲೇ ಮೂಡಬಿದಿರೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಅದಾಗಲೇ ಮೃತ ಹೊಂದಿರುವುದಾಗಿ ವರದಿಯಾಗಿದೆ.

 

 

Leave A Reply

Your email address will not be published.