RBI : ಬ್ಯಾಂಕ್ ಗ್ರಾಹಕರೆಲ್ಲರಿಗೂ ಸಿಹಿ ಸುದ್ದಿ – ಮಿನಿಮಮ್ ಬ್ಯಾಲೆನ್ಸ್ ಬಗ್ಗೆ RBI ನಿಂದ ಹೊಸ ನಿಯಮ ಜಾರಿ!!

Share the Article

RBI: ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ RBI ಸಿಹಿ ಸುದ್ದಿ ನೀಡಿದ್ದು, ಮಿನಿಮಮ್ ಬ್ಯಾಲೆನ್ಸ್ ಕುರಿತಾಗಿಯೂ ಮಹತ್ವದ ಆದೇಶವನ್ನು ಹೊರಡೆಸಿದೆ.

ಹೌದು, ಎರಡು ವರ್ಷಗಳಿಂದ ಯಾವುದೇ ವ್ಯವಹಾರ ನಡೆಸದೇ ನಿಷ್ಕ್ರಿಯಗೊಂಡಿರುವ ಬ್ಯಾಂಕ್ ಖಾತೆಯ ಖಾತೆದಾರರಿಗೆ ಬ್ಯಾಂಕ್ ಗಳು ದಂಡ ವಿಧಿಸಲು ಮುಂದಾಗಿದ್ದವು. ಆದರೆ ಇದೀಗ ಆರ್‌ಬಿಐ ಮಹತ್ವದ ಆದೇಶವನ್ನು ಹೊರಡಿಸಿದ್ದು ಯಾವುದೇ ರೀತಿಯಾದಂಡವನ್ನು, ಶುಲ್ಕವನ್ನು ವಿಧಿಸಬಾರದು ಎಂದು ಸೂಚನೆಯನ್ನು ನೀಡಿದೆ.

ಇಷ್ಟೇ ಅಲ್ಲದೆ “ನಿಷ್ಕ್ರಿಯ ಖಾತೆ ಎಂದು ವರ್ಗೀಕರಿಸಲಾದ ಯಾವುದೇ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ಗಳನ್ನು ನಿರ್ವಹಿಸದಿದ್ದಕ್ಕಾಗಿ ದಂಡ ಶುಲ್ಕವನ್ನು ವಿಧಿಸಲು ಬ್ಯಾಂಕ್‌ಗಳಿಗೆ ಅನುಮತಿ ಇಲ್ಲ. ಇದರೊಂದಿಗೆ ನಿಷ್ಕ್ರಿಯ ಖಾತೆಗಳನ್ನು ಸಕ್ರಿಯಗೊಳಿಸಲು ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ‘ಎಂದು RBI ನಿಯಮಗಳು ಹೇಳುತ್ತವೆ.

ಇದಕ್ಕಿಂತಲೂ ಬಹಳ ಮುಖ್ಯವಾದ ವಿಚಾರ ಅಂದ್ರೆ ಕಾರ್ಯನಿರ್ವಹಿಸುತ್ತಿದ್ದರೂ, ಇಲ್ಲದಿದ್ದರೂ ಸಹ ಉಳಿತಾಯ ಖಾತೆಗಳ ಮೇಲಿನ ಬಡ್ಡಿಯನ್ನು ನಿಯಮಿತವಾಗಿ ಕ್ರೆಡಿಟ್ ಮಾಡಬೇಕಾಗುತ್ತದೆ. RBI ಆದೇಶಿಸಿದ ಈ ಎಲ್ಲಾ ಮಾರ್ಗಸೂಚಿಗಳು ಏಪ್ರಿಲ್ 1 ರಿಂದ ಜಾರಿಗೆ ಬರುತ್ತವೆ ಎಂದು ಮೂಲಗಳು ತಿಳಿಸಿವೆ.

Leave A Reply