Madhyapradesh: ಹಾಸ್ಟೆಲ್ ನಿಂದ 26 ಹಿಂದೂ ಹುಡುಗಿಯರು ನಾಪತ್ತೆ!! ಹೋದದ್ದೆಲ್ಲಿಗೆ ಗೊತ್ತೇ?!
Madhyapradesh: ಮಧ್ಯಪ್ರದೇಶದ ಬೋಪಾಲ್’ನ ಹಾಸ್ಟೆಲ್ ಒಂದರಿಂದ ಸುಮಾರು 26 ಹುಡುಗಿಯರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದು, ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಪ್ರಕರಣದ ಕುರಿತು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹೌದು, ಯಾವುದೇ ಅನುಮತಿ ಇಲ್ಲದೆ ಅನುಮತಿಯಿಲ್ಲದೆ ಮಧ್ಯಪ್ರದೇಶದಲ್ಲಿ(Madhyapradesh) ಕಾರ್ಯನಿರ್ವಹಿಸುತ್ತಿದ್ದ ಮಕ್ಕಳ ಮನೆಯಿಂದ 26 ಹುಡುಗಿಯರು ನಾಪತ್ತೆಯಾದ ವಿಚಾರವನ್ನು ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್(Shivraj sing chowhan) ಟ್ವೀಟ್ ಮಾಡುವ ಮೂಲಕ ತಿಳಿಸಿದ್ದು, ವಿಷಯದ ಗಂಭೀರತೆ ಮತ್ತು ಸೂಕ್ಷ್ಮತೆಯನ್ನು ಪರಿಗಣಿಸಿ, ಸರ್ಕಾರವು ಗಮನಹರಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾನು ಮನವಿ ಮಾಡಿದ್ದಾರೆ.
ಅಂದಹಾಗೆ ಮಕ್ಕಳ ರಕ್ಷಣಾ ಆಯೋಗದ ತಂಡವು ಭೋಪಾಲ್‌ನಿಂದ 20 ಕಿ.ಮೀ ದೂರದಲ್ಲಿರುವ ಆಂಚಲ್ ಬಾಲಕಿಯರ ಹಾಸ್ಟೆಲ್‌ಗೆ ಹೋದಾಗ ಎನ್‌ಜಿಒ ಮಕ್ಕಳನ್ನು ರಕ್ಷಿಸಿ ಅಕ್ರಮ ಮಕ್ಕಳ ಮನೆಯಲ್ಲಿ ಇರಿಸುತ್ತಿರುವುದು ಕಂಡುಬಂದಿದೆ. ಇಲ್ಲಿ 4 – 5 ವರ್ಷಗಳಿಂದ ಇಲ್ಲಿ ಬಾಲಕಿಯರು ಇದ್ದಾರೆ. ಅವರಲ್ಲಿ 6 ರಿಂದ 18 ವರ್ಷದೊಳಗಿನ ಹೆಚ್ಚಿನ ಹುಡುಗಿಯರು ಹಿಂದೂಗಳು ಎಂಬುದು ಅಚ್ಚರಿ ಸಂಗತಿ ಹಾಗೂ, ಈ ಹಾಸ್ಟೆಲ್‌ನಲ್ಲಿ ಹುಡುಗಿಯರು ಕ್ರೈಸ್ತ ಆಚರಣೆಗಳನ್ನು ಬಲವಂತವಾಗಿ ಅಭ್ಯಾಸ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಇನ್ನು ಅಲ್ಲಿ 68 ಮಕ್ಕಳಿದ್ದಾರೆ ಎಂದು ದಾಖಲೆಗಳು ತೋರಿಸುತ್ತವೆ. ಆದರೆ 41 ಹುಡುಗಿಯರು ಮಾತ್ರ ಪತ್ತೆಯಾಗಿದ್ದಾರೆ. ಅದೂ ಕೂಡ ಆ ಹುಡುಗಿಯರು ಮಧ್ಯಪ್ರದೇಶ, ಗುಜರಾತ್, ಜಾರ್ಖಂಡ್ ಮೂಲದವರು ಎಂದದೂ ವರದಿಯಾಗಿದ್ದು, ಅವರಲ್ಲಿ ಕೆಲವರು ಮಧ್ಯಪ್ರದೇಶದ ಸೆಹೋರ್, ರೈಸನ್, ಚಿಂದ್ವಾರ ಮತ್ತು ಬಾಲಾಘಾಟ್ ಮೂಲದವರು. ಎಫ್ಐಆರ್ ಪ್ರಕಾರ ಆಶ್ರಯ ಗೃಹವನ್ನು ಕಾನೂನುಬಾಹಿರವಾಗಿ ನಡೆಸಲಾಗುತ್ತಿತ್ತು. ಅಲ್ಲಿ ಇನ್ನೂ ಅನೇಕ ಅಕ್ರಮಗಳು ಕಂಡು ಬಂದಿವೆ. ಇತರೆ ರಾಜ್ಯಗಳಿಂದ ಇಲ್ಲಿಗೆ ಮಕ್ಕಳು ಹೇಗೆ ಬಂದರು ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಸದ್ಯ ಇದೀಗ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಮುಖ್ಯಸ್ಥ ಪ್ರಿಯಾಂಕ್ ಕಾನೂಂಗೊ ಸಹ ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿ ವೀರ ರಾಣಾ ಅವರಿಗೆ ಪತ್ರ ಬರೆದಿದ್ದು, 7 ದಿನಗಳಲ್ಲಿ ವರದಿ ನೀಡುವಂತೆ ಕೋರಿದ್ದಾರೆ. ಅಲ್ಲದೆ ಮಕ್ಕಳ ಮನೆಯಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಇರಲಿಲ್ಲ. ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ರಾತ್ರಿಯಲ್ಲಿ ಇಬ್ಬರು ಪುರುಷ ಕಾವಲುಗಾರರು ಇರುತ್ತಿದ್ದರು. ಇದು ನಿಯಮಗಳ ಉಲ್ಲಂಘನೆಯಾಗಿದೆ. ಬಾಲಕಿಯರ ಆಶ್ರಯ ಗೃಹದಲ್ಲಿ ಮಹಿಳಾ ಕಾವಲುಗಾರರನ್ನು ಮಾತ್ರ ಹೊಂದಿರುವುದು ಕಡ್ಡಾಯ. ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಕಳುಹಿಸಲಾಗಿದೆ.