Bantwala: ಮೊಡಂಕಾಪು ರೈಲ್ವೇ ಮೇಲ್ಸೇತುವೆ ಕಬ್ಬಿಣದ ಕಮಾನಿನಲ್ಲಿ ಸಿಲುಕಿದ ಲಾರಿ!!!

Share the Article

Bantwala: ಬಿ.ಸಿ.ರೋಡು-ಪೊಳಲಿ ರಸ್ತೆಯ ಮೊಡಂಕಾಪು ರೈಲ್ವೇ ಮೇಲ್ಸೇತುವೆಯ ತಳ ಭಾಗದಲ್ಲಿ ಅಳವಡಿಸಿದ್ದ ಕಬ್ಬಿಣದ ಕಮಾನಿನಲ್ಲಿ ಕಂಟೈನರ್‌ ಲಾರಿಯೊಂದು ಸಿಲುಕಿ ಹಾಕಿಕೊಂಡಿರುವ ಘಟನೆಯೊಂದು ನಡೆದಿದೆ.

ಕಮಾನಿನ ಅರಿವಿಲ್ಲದ ಲಾರಿ ಚಾಲಕ ಗಾಡಿ ಚಲಾಯಿಸಿದ್ದು, ಇದೀಗ ಲಾರಿಯ ಮೇಲ್ಭಾಗ ಕಮಾನಿನಲ್ಲಿ ಸಿಲುಕಿದೆ. ಬೆಂಗಳೂರಿನಿಂದ ಮಂಗಳೂರುಗೆ ಬರುತ್ತಿದ್ದ ಲಾರಿಯು ಕೆಮಿಕಲ್‌ ಬ್ಯಾರಲ್‌ಗಳನ್ನು ತುಂಬಿಕೊಂಡು ಬರುತ್ತಿತ್ತು. ಲಾರಿ ಚಾಲಕ ಗೂಗಲ್‌ ಮ್ಯಾಪ್‌ ಹಾಕಿ ಒಳರಸ್ತೆಯಲ್ಲಿ ಸಂಚರಿಸಿ ಗೊಂದಲಕ್ಕೆ ಒಳಗಾಗಿರುವ ಕುರಿತು ವರದಿಯಾಗಿದೆ. ನಂತರ ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಆಗಮನಿಸಿ ಲಾರಿಯನ್ನು ಕ್ರೇನ್‌ ಮೂಲಕ ತೆರವು ಮಾಡುವ ಕೆಲಸ ಮಾಡಿದ್ದಾರೆ ಎಂದು ವರದಿಯಾಗಿದೆ.

Leave A Reply