Home latest Death News: ಚಲಿಸುತ್ತಿದ್ದ ರೈಲಿನಲ್ಲಿ ಪತಿ ಶವದ ಪಕ್ಕದಲ್ಲೇ 13 ಗಂಟೆ ಪ್ರಯಾಣ ಮಾಡಿದ ಪತ್ನಿ!!...

Death News: ಚಲಿಸುತ್ತಿದ್ದ ರೈಲಿನಲ್ಲಿ ಪತಿ ಶವದ ಪಕ್ಕದಲ್ಲೇ 13 ಗಂಟೆ ಪ್ರಯಾಣ ಮಾಡಿದ ಪತ್ನಿ!! ಗೊತ್ತಾಗಲೇ ಇಲ್ಲ ದುರಂತ!!!

Death News

Hindu neighbor gifts plot of land

Hindu neighbour gifts land to Muslim journalist

ಚಲಿಸುತ್ತಿದ್ದ ರೈಲಿನಲ್ಲಿ ಪತ್ನಿಯು ತನ್ನ ಮೃತ ಪತಿಯ ಪಕ್ಕದಲ್ಲೇ 13 ಗಂಟೆಗಳ ಕಾಲ ಕುಳಿತಿರುವ ಘಟನೆಯೊಂದು ನಡೆದಿದೆ. ಅಹಮದಾಬಾದ್‌ನಿಂದ ಅಯೋಧ್ಯೆಗೆ ಹೋಗುವ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಅವಘಡ ಸಂಭವಿಸಿದೆ.

ದಂಪತಿ ತಮ್ಮ ಮಕ್ಕಳೊಂದಿಗೆ ಸೂರತ್‌ನಿಂದ ಅಯೋಧ್ಯೆಗೆ ರೈಲು ಹತ್ತಿದ್ದಾರೆ. ಕುಂಟಬ ಸಮೇತ ರೈಲು ಹತ್ತಿದ ವ್ಯಕ್ತಿ ಸ್ವಲ್ಪ ಸಮಯದಲ್ಲೇ ಹೆಂಡತಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಲಗಿದ್ದ.

ಅದೇ ಕೊನೆ ಆತ ಮಲಗಿದ್ದು, ಆತ ಮೇಲೆ ಏಳಲೇ ಇಲ್ಲ. ಹಲವಾರು ಗಂಟೆಗಳವರೆಗೆ ಗಂಡ ಎದ್ದೇಳದೇ ಇರುವುದನ್ನು ಕಂಡ ಆ ಕುಟುಂಬ ನಿಜಕ್ಕೂ ಗಾಬರಿಗೊಂಡಿದೆ. ಎಷ್ಟೇ ಎದ್ದೇಳಿಸಲು ಪ್ರಯತ್ನಪಟ್ಟರೂ ಆ ವ್ಯಕ್ತಿ ಎದ್ದೇಳಲೇ ಇಲ್ಲ.

ಇದನ್ನೂ ಓದಿ: ಮುರಿದು ಬಿತ್ತಾ ಸ್ನೇಹಿತ್‌-ನಮ್ರತಾ ಸ್ನೇಹ ಸಂಬಂಧ? ದೂರಾಗಲು ಕಾರಣವೇನು?

ಏಕೆಂದರೆ ಆ ವ್ಯಕ್ತಿ ಅಲ್ಲೇ ಮಲಗಿದಲ್ಲೇ ತನ್ನ ಪ್ರಾಣ ಕಳೆದುಕೊಂಡಿದ್ದ. ಈ ಕ್ಷಣವನ್ನು ನೆನೆದು ನಿಜಕ್ಕೂ ಕುಟುಂಬದವರಿಗೆ ನಂಬಲು ಸಾಧ್ಯವಾಗಲೇ ಇಲ್ಲ. ಅವರು ಅಷ್ಟೊಂದು ಆಘಾತಕ್ಕೊಳಗಾಗಿದ್ದರು. ಸಹಜ ಸ್ಥಿತಿಯಲ್ಲಿ ರೈಲು ಹತ್ತಿದ ವ್ಯಕ್ತಿ ಪ್ರಯಾಣದ ಮಧ್ಯದಲ್ಲಿ ನಿಧನರಾಗಿದ್ದು, ಈ ಸತ್ಯ ಅರಗಿಸಲು ಆ ವ್ಯಕ್ತಿಯ ಕುಟುಂಬದವರಿಗೆ ಆಗಲೇ ಇಲ್ಲ.

ಆ ವ್ಯಕ್ತಿ ಸತತವಾಗಿ ಸುಮಾರು 13 ಗಂಟೆಗಳ ಕಾಲ ತನ್ನ ಹೆಂಡತಿ ಪಕ್ಕದಲ್ಲೇ ಮಲಗಿದ್ದರೂ, ನಡೆದ ದುರಂತದ ಅರಿವು ಆಕೆಗಿರಲಿಲ್ಲ. ಆ ವ್ಯಕ್ತಿ ಮೃತ ಪಟ್ಟಿರುವುದು ದೃಢ ಪಟ್ಟ ನಂತರವೇ ಶವವನ್ನು ಝಾನ್ಸಿ ಜಂಕ್ಷನ್‌ನಲ್ಲಿ ಇಳಿಸಲಾಯಿತು. ಈ ಘಟನೆ ನಿಜಕ್ಕೂ ಪ್ರಯಾಣಿಕರಿಗೆ ಆಘಾತ ತಂದಿತ್ತು.