KSRTC Ticket: ಇನ್ನು ಮುಂದೆ KSRTC ಬಸ್‌ನಲ್ಲಿ ಟಿಕೆಟ್‌ಗೆ ನಗದು ಕೊಡಬೇಕಿಲ್ಲ!!! ಸಿಗಲಿದೆ ಈ ಸೌಲಭ್ಯ!!!

KSRTC ಪ್ರಯಾಣಿಕರಿಗೆ ಬಂಪರ್‌ ಸಿಹಿ ಸುದ್ದಿ. ಅತಿ ಶೀಘ್ರದಲ್ಲೇ ಪ್ರಯಾಣಿಕರಿಗೆ ಹೊಸದೊಂತು ಸೌಲಭ್ಯ ದೊರಕಲಿದೆ. ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಯಂತ್ರಗಳ (ಇಟಿಎಂ) ಮೂಲಕ ಪಾವತಿಗಳನ್ನು ಮಾಡುವ ಸೌಲಭ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ವರದಿಯಾಗಿದೆ.

10,000 ಸ್ಮಾರ್ಟ್‌ ಇಟಿಎಂಗಳ ಖರೀದಿಗೆ ನಿಗಮವು ಟೆಂಡರ್‌ ಕರೆದಿದೆ ಎಂದು ವರದಿಯಾಗಿದೆ. ಬಿಎಂಟಿಸಿ ಪ್ರಯಾಣಿಕರಿಗೆ ಡಿಜಿಟಲ್‌ ಪಾವತಿ ಸೌಲಭ್ಯ ಇರುವಂತೆ ಕೆಎಸ್‌ಆರ್‌ಟಿಸಿ ಸಹ ತನ್ನ ಪ್ರಯಾಣಿಕರಿಗೆ ಡಿಜಿಟಲ್‌ ಪಾವತಿ ಸೌಲಭ್ಯ ಒದಗಿಸಲು ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.\

ಇದನ್ನೂ ಓದಿ: OPS News: ಹೊಸ ವರ್ಷಕ್ಕೆ ಸರಕಾರದಿಂದ ದೊಡ್ಡ ಘೋಷಣೆ; ಸರಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿ!!!

ಈ ಯಂತ್ರವು ಅಂಡ್ರಾಯ್ಡ್‌ ಆಧಾರಿತ ಸಾಧನ. ಇವು ಟಿಕೆಟನ್ನು ಮುದ್ರಿಸುತ್ತದೆ. 4G/wifi ಇಂಟರ್ಫೇಸ್‌ ಮೂಲಕ ಕೇಂದ್ರ ಸರ್ವರ್‌ಗೆ ಟಿಕೆಟ್‌ ಡೇಟಾವನ್ನು ಕಳುಹಿಸುತ್ತದೆ ಎಂದು ವರದಿಯಾಗಿದೆ. UPI ಮತ್ತು ಡಿಜಿಟಲ್‌ ವಹಿವಾಟಿನ ಮೂಲಕ QR ಕೋಡ್‌ಗಳನ್ನು ಒಳಗೊಂಡಿದೆ. ಇವುಗಳ ಮೂಲಕ ಇನ್ನು ಪ್ರಯಾಣಿಕರು ನಗದು ರಹಿತ ಪ್ರಯಾಣ ಮಾಡಬಹುದು.

Leave A Reply

Your email address will not be published.