YS Sharmila Joins Congress: ʼಕೈʼ ಹಿಡಿದ ಆಂಧ್ರ ಸಿಎಂ ಜಗನ್ ಸಹೋದರಿ ವೈ.ಎಸ್.ಶರ್ಮಿಳಾ! ಕಾಂಗ್ರೆಸ್‌ನೊಂದಿಗೆ ವೈಎಸ್‌ಆರ್ ಪಕ್ಷ ವಿಲೀನ!
YS Sharmila: ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾ(YS Sharmila) ಇಂದು ಕಾಂಗ್ರೆಸ್(Congress)ಗೆ ಸೇರ್ಪಡೆಗೊಂಡಿದ್ದಾರೆ. ಹೈದರಾಬಾದ್‌ನ ಪುಲಿವೆಂದುಲಾದಲ್ಲಿ ವೈ ಎಸ್ ರಾಜಶೇಖರ ರೆಡ್ಡಿ ಮತ್ತು ವಿಜಯಮ್ಮ ದಂಪತಿಯ ಪುತ್ರಿ. ಇವರಿಗೆ 49 ವರ್ಷ ವಯಸ್ಸು.
ವೈ ಎಸ್ ರಾಜಶೇಖರ ರೆಡ್ಡಿ ಅವಿಭಜಿತ ಆಂಧ್ರದ ಮುಖ್ಯಮಂತ್ರಿಯಾಗಿದ್ದಾರೆ ಇವರ ತಂದೆ. ಶರ್ಮಿಳಾ ಅವರ ಹಿರಿಯ ಸಹೋದರ ಜಗನ್ ಮೋಹನ್ ಆಂಧ್ರಪ್ರದೇಶದ ಪ್ರಸ್ತುತ ಮುಖ್ಯಮಂತ್ರಿ.
ಇದನ್ನು ಓದಿ: Siddaganga shri: ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಹೋಗುವುದಿಲ್ಲ ಎಂದ ಸಿದ್ದಗಂಗಾ ಶ್ರೀ !! ಯಾಕಂತೆ ಗೊತ್ತಾ?
ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ ನಂತರ ಮಾತನಾಡಿದ ವೈ ಎಸ್ ಶರ್ಮಿಳಾ ” ಇಂದು ವೈಎಸ್ ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸಲು ನನಗೆ ತುಂಬಾ ಸಂತೋಷವಾಗಿದೆ. ವೈಎಸ್‌ಆರ್ ತೆಲಂಗಾಣ ಪಕ್ಷವು ಇಂದಿನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಭಾಗವಾಗಲಿದೆ ಎಂಬುವುದು ನನಗೆ ಅಪಾರ ಸಂತೋಷವನ್ನು ನೀಡುತ್ತದೆ. ಕಾಂಗ್ರೆಸ್ ಪಕ್ಷವು ಇನ್ನೂ ನಮ್ಮ ದೇಶದ ಅತಿದೊಡ್ಡ ಜಾತ್ಯತೀತ ಪಕ್ಷವಾಗಿದೆ ಮತ್ತು ಅದು ಯಾವಾಗಲೂ ಭಾರತದ ನಿಜವಾದ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ ಮತ್ತು ನಮ್ಮ ರಾಷ್ಟ್ರದ ಅಡಿಪಾಯವನ್ನು ನಿರ್ಮಿಸಿದೆ ಎಂದು ಹೇಳಿದ್ದಾರೆ. “