Home Interesting Jitendra Awhad: ರಾಮ ಮಾಂಸಹಾರಿ, NCP ನಾಯಕನ ವಿವಾದಾತ್ಮಕ ಹೇಳಿಕೆ!!

Jitendra Awhad: ರಾಮ ಮಾಂಸಹಾರಿ, NCP ನಾಯಕನ ವಿವಾದಾತ್ಮಕ ಹೇಳಿಕೆ!!

Jitendra Awhad

Hindu neighbor gifts plot of land

Hindu neighbour gifts land to Muslim journalist

Jitendra Awhad: ಮಾಜಿ ಸಚಿವ ಜಿತೇಂದ್ರ ಆವ್ಹಾದ್(Jitendra Awhad) ಶ್ರೀರಾಮನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ರಾಮ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಮಾಜಿ ಸಚಿವ ಜಿತೇಂದ್ರ ಆವ್ಹಾದ್(Jitendra Awhad) ರಾಮನನ್ನು ಮಾಂಸಾಹಾರಿ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಇದನ್ನು ಓದಿ: Udupi: ಬಿಜೆಪಿಯ ಹಿರಿಯ ಮುಖಂಡ ಸುಧಾಕರ ಶೆಟ್ಟಿ ನಿಧನ!

ನಾವು ರಾಮನನ್ನು ಆದರ್ಶ ವ್ಯಕ್ತಿ ಎಂದು ನಂಬುತ್ತೇವೆ. ಆದರೆ, ರಾಮ ಮಾಂಸಾಹಾರಿಯಾಗಿದ್ದು, 14 ವರ್ಷಗಳ ಕಾಲ ಕಾಡಿನಲ್ಲಿ ವಾಸಿಸುವ ವ್ಯಕ್ತಿಯು ಸಸ್ಯಾಹಾರವನ್ನು ಹುಡುಕಲು ಎಲ್ಲಿಗೆ ಹೋಗುತ್ತಾನೆ ಎಂದು ಪ್ರಶ್ನೆ ಕಾಡುತ್ತಿದೆ. ಜಿತೇಂದ್ರ ಅವರು ಕ್ಷತ್ರಿಯರು ಎಂದೂ ಮಾಂಸಹಾರಿಗಳು, ರಾಮ ಕೂಡ ಮಾಂಸಾಹಾರಿ ಎಂದಿದ್ದಾರೆ.ಈ ಹೇಳಿಕೆಗೆ ಸಂಬಂಧಿಸಿದಂತೆ ಅಜಿತ್ ಪವಾರ್ ಬಣದ ಎನ್‌ಸಿಪಿ ಕೂಡ ಮುಂಬೈನಲ್ಲಿ ಪ್ರತಿಭಟನೆ ನಡೆಸಿದೆ. ಜಿತೇಂದ್ರ ಆವ್ಹಾದ್ ಅವರ ಹೇಳಿಕೆಯ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.