Minimum Balance: Bank ಗ್ರಾಹಕರೇ ಗಮನಿಸಿ, ಬ್ಯಾಂಕಿನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರದಿದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಫಿಕ್ಸ್!!

 

Minimum Balance: SBI, HDFC, ICICI ಬ್ಯಾಂಕ್‌ಗಳಲ್ಲಿ ನಿಮ್ಮ ಅಕೌಂಟ್ ಇದ್ದರೆ ಈ ವಿಚಾರ ತಿಳಿದುಕೊಳ್ಳಿ. ಬ್ಯಾಂಕ್‌ಗಳು (Bank)ತಮ್ಮ ಗ್ರಾಹಕರಿಗೆ ಉಳಿತಾಯ ಖಾತೆಗಳಲ್ಲಿ (Savings account)ಅನೇಕ ಸೌಲಭ್ಯಗಳನ್ನು ಒದಗಿಸುತ್ತವೆ. ಆದರೆ ಈ ಸೌಲಭ್ಯಗಳ ಜೊತೆಗೆ ಗ್ರಾಹಕರು ಕೆಲವು ನಿಯಮಗಳನ್ನು ಅನುಸರಿಸಬೇಕು. ಅದೇ ರೀತಿ, ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ (Minimum Balance) ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ.

 

ಪ್ರತಿಯೊಂದು ಬ್ಯಾಂಕ್ ನಲ್ಲಿ ಇಂತಿಷ್ಟೇ ಬ್ಯಾಲೆನ್ಸ್ ಇರಬೇಕು ಎಂಬ ನಿಯಮವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI )ತನ್ನ ಖಾತೆಗಳಲ್ಲಿ ಪ್ರದೇಶದ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮವನ್ನು ಹೊಂದಿದೆ. ಗ್ರಾಮೀಣ ಪ್ರದೇಶಗಳಿಗೆ ಮಿತಿ 1,000 ರೂ. ಆಗಿದ್ದು, ಅರೆ ನಗರ ಪ್ರದೇಶದ ಗ್ರಾಹಕರು ತಮ್ಮ ಖಾತೆಯಲ್ಲಿ 2,000 ರೂ. ಆದರೆ ಮೆಟ್ರೋ ನಗರದಲ್ಲಿ ಈ ಮಿತಿ 3 ಸಾವಿರ ರೂಪಾಯಿ ಇರಬೇಕು.

 

ICICI ಬ್ಯಾಂಕ್ ಪ್ರದೇಶಕ್ಕೆ ಅನುಗುಣವಾಗಿ ತಮ್ಮ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಹೊಂದಿರಬೇಕು. ನಗರ ಪ್ರದೇಶಗಳಿಗೆ ಕನಿಷ್ಠ ಮಿತಿ ರೂ 10,000 ಆಗಿದ್ದು, ಅರೆ ನಗರ ಪ್ರದೇಶಗಳಿಗೆ ರೂ 5,000 ಇರಬೇಕು.ಅದೇ ರೀತಿ, ಗ್ರಾಮೀಣ ಪ್ರದೇಶಗಳಿಗೆ 2,500 ರೂಪಾಯಿ ಕನಿಷ್ಠ ಮಿತಿ ಇರಲೇ ಬೇಕು.ಪ್ರಸ್ತುತ, ನೀವು ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ, ನೀವು ದಂಡವನ್ನು ಪಾವತಿಸಬೇಕಾಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ(HDFC Bank)ಸರಾಸರಿ ಕನಿಷ್ಠ ಬ್ಯಾಲೆನ್ಸ್ ಮಿತಿಯು ನಗರಗಳಲ್ಲಿ 10,000 ರೂ ಆಗಿದೆ. ಅದೇ ರೀತಿ, ಅರೆ ನಗರ ಪ್ರದೇಶಗಳಲ್ಲಿ 5,000 ರೂ.ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 2,500 ರೂಪಾಯಿಯಿರಬೇಕು.

ಇದನ್ನು ಓದಿ: Captain Miller ಕಾರ್ಯಕ್ರಮದಲ್ಲಿ ಯುವಕನಿಂದ ನಿರೂಪಕಿ ಮೇಲೆ ಕಿರುಕುಳ: ಹಲ್ಲೆಗೊಳಗಾದ ನಿರೂಪಕಿ ಮಾಡಿದ್ದೇನು??

Leave A Reply

Your email address will not be published.