CM Siddaramaiah: ದೇವಸ್ಥಾನದೊಳಗೆ ಬರಲೊಪ್ಪದ ಸಿಎಂ ಸಿದ್ದರಾಮಯ್ಯ; ಈ ಪರಿ ಹಿಂದೂ ದ್ವೇಷವೇ? ಬಿಜೆಪಿಯಿಂದ ತೀವ್ರ ಟೀಕೆ!!!
CM.Siddaramaiah: ವಿಜಯಪುರ ಜಿಲ್ಲೆಯ ದ್ಯಾಬೇರಿಗೆ ತೆರಳಿದ್ದ ಸಿ ಎಂ ಸಿದ್ದರಾಮಯ್ಯ ದೇವಸ್ಥಾನದ ಒಳಾಂಗಣ ಪ್ರವೇಶಿಸದೆ ಹೊರಗಡೆಯಿಂದಲೇ ನಮಸ್ಕಾರ ಮಾಡಿದ ಘಟನೆಯೊಂದು ಮಂಗಳವಾರ ನಡೆದಿದ್ದು, ಇದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ದ್ಯಾಬೇರಿ ಗ್ರಾಮದ ಶ್ರೀ ವಾಗ್ದೇವಿ ಸೇವಾ ಸಮಿತಿ ದ್ಯಾಬೇರಿ ವತಿಯಿಂದ ಆಯೋಜಿಸಿರುವ ಶ್ರೀ ವಾಗ್ದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಮಂಗಳವಾರ ಮಧ್ಯಾಹ್ನ ಭಾಗಿಯಾಗಿದ್ದರು. ಅನಂತರ ಅಲ್ಲಿಂದ ನೇರವಾಗಿ ದ್ಯಾಬೇರಿ ಗ್ರಾಮದ ಶ್ರೀ ವಾಗ್ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಮೊದಲಿಗೆ ದ್ಯಾಬೇರಿ ಕೆರೆಗೆ ಬಾಗಿನ ಅರ್ಪಿಸಿದ್ದಾರೆ. ನಂತರ ಶ್ರೀ ವಾಗ್ದೇವಿ ದೇವಸ್ಥಾನಕ್ಕೆ ಹೋಗಿದ್ದಾರೆ. ಈ ದೇವಸ್ಥಾನವನ್ನು ಇತ್ತೀಚೆಗೆ ನವೀಕರಣ ಮಾಡಲಾಗಿದ್ದು, ಇಲ್ಲಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ಇದನ್ನು ಸಿಎಂ ಉದ್ಘಾಟನೆ ಮಾಡಿದ್ದಾರೆ. ನಂತರ ಗರ್ಭಗುಡಿಯ ಬಾಗಿಲ ಬಳಿ ಬಂದ ಸಿಎಂ ಸಿದ್ದರಾಮಯ್ಯ, ಹಾಗೂ ಎಂ ಬಿ ಪಾಟೀಲ ಅವರನ್ನು ಪೂಜಾರಿಗಳು ಒಳಗಡೆ ಬರಲು ಹೇಳಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ನಾ ಒಲ್ಲೆ ಎಂದು ಸನ್ನೆ ಮಾಡಿ ಪೂಜೆ ಮಾಡಿ ಎಂದು ಸನ್ನೆಯ ಮೂಲಕ ಹೇಳಿದರು. ಎಂ ಬಿ ಪಾಟೀಲ ಅವರು ಒಳಗೆ ಬನ್ನಿ ಸರ್ ಎಂದು ಕರೆದರೂ ಸಿಎಂ ಒಳಗಡೆ ಪ್ರವೇಶ ಮಾಡಲಿಲ್ಲ. ಹೂಮಾಲೆಯನ್ನು ಕೂಡಾ ಎಂ ಬಿ ಪಾಟೀಲ ಅವರ ಕೈಗೆ ನೀಡಿ ನೀವು ಹೋಗಿ ಎಂದು ಹೇಳಿದರು.
ಇದೀಗ ಸಿಎಂ ಅವರ ಈ ನಡೆಯನ್ನು ಟ್ವೀಟ್ ಮಾಡಿರುವ ಬಿಜೆಪಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಇದು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ.ನೀಡಿ ರಾಮಮಂದಿರಕ್ಕೆ ಒಂದು ರೂ, ಸಹ ದೇಣಿಗೆ ನೀಡದ ಚುನಾವಣಾ ಹಿಂದೂ ಸಿಎಂ ಸಿದ್ದರಾಮಯ್ಯ ಅಸಲಿ ಮುಖ ಎಂದು ಟೀಕಿಸಿದೆ. ಸಿಎಂ ಅವರ ಈ ನಡೆ ಕುರಿತು ಬಿಜೆಪಿ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.