Home Breaking Entertainment News Kannada Animal OTT Release Date: ಅನಿಮಲ್ OTT ರಿಲೀಸ್ ಡೇಟ್ ಫಿಕ್ಸ್: ಯಾವಾಗ ಸ್ಟ್ರೀಮಿಂಗ್ ಆಗಲಿದೆ...

Animal OTT Release Date: ಅನಿಮಲ್ OTT ರಿಲೀಸ್ ಡೇಟ್ ಫಿಕ್ಸ್: ಯಾವಾಗ ಸ್ಟ್ರೀಮಿಂಗ್ ಆಗಲಿದೆ ಗೊತ್ತಾ??

Animal OTT Release Date

Hindu neighbor gifts plot of land

Hindu neighbour gifts land to Muslim journalist

Animal OTT Release Date: ರಣಬೀರ್ ಕಪೂರ್‌ ಅಭಿನಯದ ಅನಿಮಲ್‌(Animal)ಸಿನಿಮಾ ಎಲ್ಲೆಡೆ ವೈರಲ್ ಆಗಿ ಬಾಕ್ಸ್ ಆಫೀಸಲ್ಲಿ ಸದ್ದು ಮಾಡುತ್ತಿದೆ. ರಣಬೀರ್‌ ಕಪೂರ್‌, ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಸಿನಿಮಾ ಪ್ಯಾನ್ ಇಂಡಿಯನ್ ಮಟ್ಟದಲ್ಲಿ ಡಿಸೆಂಬರ್ 1 ರಂದು ಬಿಡುಗಡೆಯಾಗಿದ್ದು, ಸಂದೀಪ್ ವಂಗಾ ಅವರು ಈ ಚಿತ್ರದಲ್ಲಿ ಅಪ್ಪ-ಮಗನ ಬಾಂಧವ್ಯದ ಹಿನ್ನೆಲೆಯನ್ನು ಇಟ್ಟುಕೊಂಡು ಕ್ರೈಂ ಡ್ರಾಮಾ ಥ್ರಿಲ್ಲರ್ ಸಿನಿಮಾ ನಿರ್ಮಿಸಿದ್ದಾರೆ. ಇನ್ನೂ ಈ ಸಿನಿಮಾ ಯಾವಾಗ OTT ಯಲ್ಲಿ ಸ್ಟ್ರೀಮಿಂಗ್(Animal OTT Release Date) ಆಗುತ್ತೆ ಎಂದು ಕಾತುರದಿಂದ ಎದುರು ನೋಡುತ್ತಿದ್ದಾರೆ.

ರಣಬೀರ್ ಕಪೂರ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನಿಮಲ್ ರಣಬೀರ್ ಕಪೂರ್ ಅವರ ವೃತ್ತಿಜೀವನದ ದೊಡ್ಡ ಹಿಟ್ ತಂದುಕೊಟ್ಟಿದೆ. ಬಾಬಿ ಡಿಯೋಲ್ ಖಳನಾಯಕನ ಪಾತ್ರದಲ್ಲಿ ನಟಿಸಿದ್ದು, ಸುಮಾರು ನೂರು ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಿದೆಯಂತೆ. ಈ ಚಿತ್ರವನ್ನು ಹಿಂದಿಯ ಟಾಪ್ ಪ್ರೊಡಕ್ಷನ್ ಕಂಪನಿ ಟಿ ಸೀರೀಸ್ ನಿರ್ಮಿಸಿದ್ದು, ಹಿಂದಿಯ ಜೊತೆಗೆ ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರವು ಬಿಡುಗಡೆಯಾಗಿದ್ದು, ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಿದೆ.

ಇದನ್ನು ಓದಿ: Health Care: ಕಿತ್ತಳೆ ಹಣ್ಣು ತಿಂದು ಸಿಪ್ಪೆಯನ್ನು ಎಸೆಯಬೇಡಿ, ಇದರಲ್ಲಿ ಅಡಗಿದೆ ಬ್ಯೂಟಿ ಸೀಕ್ರೆಟ್ಸ್!

ಬಾಲಿವುಡ್‌ನಲ್ಲಿ ಭಾರೀ ಸುದ್ದಿ ಮಾಡಿದ ಸಿನಿಮಾಗಳಲ್ಲಿ ಒಂದಾಗಿರುವ ಅನಿಮಲ್ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಹಿಂದಿ ಸಿನಿಮಾವಾಗಿದ್ದು,ಅಮೆರಿಕಾದಲ್ಲಿ ಅದು ಈಗಾಗಲೇ 13 ಮಿಲಿಯನ್ ಡಾಲರ್ ಸಂಗ್ರಹಿಸಿದೆಯಂತೆ. ಈ ಸಿನಿಮಾದ ಒಟಿಟಿ ವಿಚಾರ ಗಮನಿಸಿದರೆ, ಅನಿಮಲ್ ಓಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ ಎನ್ನಲಾಗಿದೆ. ಜನವರಿ 26 ಗಣರಾಜ್ಯೋತ್ಸವದಿಂದ ಈ ಸಿನಿಮಾ ಸ್ಟ್ರೀಮ್ ಆಗಲಿದೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ ಅನಿಮಲ್ ವರ್ಲ್ಡ್ ವೈಡ್ ರೂ. 493.50 ಕೋಟಿ (ರೂ. 898.90 ಕೋಟಿ ಒಟ್ಟು)ಗಳಿಕೆ ಮಾಡಿದೆ ಎನ್ನಲಾಗಿದೆ.