Congress MLA: ಮಹಿಳೆಯ ಜೊತೆ ಕಾಂಗ್ರೆಸ್ ಶಾಸಕನ ಅಸಭ್ಯ ವರ್ತನೆ !! ತುಟಿಗೆ ಕೇಕ್ ಸವರುತ್ತಾ… ವೈರಲ್ ಆಯ್ತು ವಿಡಿಯೋ !!

Congress MLA: ನಮ್ಮ ಜನಪ್ರತಿನಿಧಿಗಳು ಯಾವುದೇ ಕೆಲಸ ಮಾಡಲಿ ಅದು ಆ ಕೂಡಲೇ ವೈರಲ್ ಆಗಿಬಿಡುತ್ತದೆ. ಅದು ಒಳ್ಳೆಯದಿರಲಿ ಕೆಟ್ಟದಿರಲಿ ಅಷ್ಟು ಬೇಗ ಎಲ್ಲೆಡೆ ಪ್ರಚಾರ ಆಗಿಬಿಡುತ್ತದೆ. ಹೀಗಾಗಿ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ತೆರಳಿದರೂ ಕೂಡ ಅವರೆಲ್ಲರೂ ಜಾಗರೂಕರಾಗಿ, ಶಿಸ್ತಿನಿಂದ ವರ್ತಿಸುತ್ತಾರೆ. ಆದರೆ ಇಲ್ಲೊಂದೆಡೆ ಕಾಂಗ್ರೆಸ್ ಶಾಸಕ(Congress MLA)ಖಾಸಗೀ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಭಾರೀ ಫೇಮಸ್ ಆಗಿಬಿಟ್ಟಿದ್ದಾರೆ.

 

ಹೌದು, ತೆಲಂಗಾಣದಲ್ಲಿ ಕೆಲವು ಸಮಯದ ಹಿಂದಷ್ಟೇ ಚುನಾವಣೆ ನಡೆದು ಕಾಂಗ್ರೆಸ್ ಅಭೂತಪೂರ್ವ ಜಯ ಗಳಿಸಿ ಅಧಿಕಾರಕ್ಕೆ ಬಂದಿದೆ. ಈ ಗೆಲುವಿನ ಮತ್ತಿನಲ್ಲಿರೋ ಮನಕೊಂಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕವ್ವಂಪಲ್ಲಿ ಸತ್ಯನಾರಾಯಣ ಅವರು ಖಾಸಗೀ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಅಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದ್ದು, ಆಕ್ರೋಶ ಕೇಳಿಬರುತ್ತಿದೆ.

 

ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿದೆ. ಅದರಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರು ಹಾಗೂ ಸಚಿವರ ಅಪಾರ ಬೆಂಬಲಿಗರ ನಡುವೆ ಮಹಿಳೆಯೊಬ್ಬರು ಕೇಕ್ ಕತ್ತರಿಸಿ ಹಂಚಿದ್ದಾರೆ. ಆಗ ಕೊಂಚ ದೂರದಲ್ಲಿದ್ದ ಶಾಸಕ ಸತ್ಯನಾರಾಯಣ ಎಲ್ಲರನ್ನೂ ತಳ್ಳಿಕೊಂಡು ಕೇಕ್ ಬಳಿ ಬಂದಿದ್ದಾರೆ. ಬಳಿಕ ಕೇಕ್ ಕತ್ತರಿಸಿ ಹಂಚುತ್ತಿದ್ದ ಮಹಿಳೆಯ ಮುಖಕ್ಕೆ ಕೇಕ್ ಹಚ್ಚಿದ್ದಾರೆ. ಕೇಕ್ ಹಚ್ಚುವುದನ್ನು ತಡೆಯುವ ಪ್ರಯತ್ನ ಮಾಡಿದರೂ ಶಾಸಕರು ಮಾತ್ರ ಮಹಿಳೆಯ ಮುಖಕ್ಕೆ ಬಿಡದೆ ಮೂರು ಬಾರಿ ಈ ರೀತಿ ಮಾಡಿದ್ದಾರೆ. ಆರಂಭದಲ್ಲೇ ಕೆನ್ನೆಗೆ ಕೇಕ್ ಹಚ್ಚಿದ ಶಾಸಕ, ಬಳಿಕ ತುಟಿಗೂ ಹಚ್ಚಿದ್ದಾರೆ. ಆ ಮಹಿಳೆ ಎಷ್ಟೇ ಪ್ರತಿಭಟಿಸಿದರೂ ಶಾಸಕರು ಮಾತ್ರ ತಮ್ಮ ವರಸೆ ಬದಲಿಸಲೇ ಇಲ್ಲ.

ಇದನ್ನು ಓದಿ: Mangaluru: ಪಿಲಿಚಾಮುಂಡಿ ದೈವದ ಪವಾಡ; ದೈವಸ್ಥಾನದಲ್ಲಿ ಹುಲಿ ಹೆಜ್ಜೆ ಪತ್ತೆ!!!

ಇಷ್ಟೇ ಅಲ್ಲದೆ ಕೇಕ್ ಕತ್ತರಿಸಿ ಆದ ಬಳಿಕ ಡಿಜೆ ಹಾಕಿ ಎಲ್ಲರೂ ಸಂಭ್ರಮಿಸಿದ್ದಾರೆ. ಈ ವೇಳೆಯಲ್ಲೂ ಶಾಸಕರು ಇಬ್ಬರು ಮಹಿಳೆಯರ ಕೈಹಿಡಿದು ಡ್ಯಾನ್ಸ್ ಮಾಡುವ ಪ್ರಯತ್ನ ಮಾಡಿದ್ದಾರೆ. ಮಹಿಳೆಯರು ಡ್ಯಾನ್ಸ್‌ಗೆ ಹಿಂದೇಟು ಹಾಕಿದ್ದರೂ ಶಾಸಕರು ಮಾತ್ರ ಮಹಿಳೆಯರ ಕೈಹಿಡಿದು ಡ್ಯಾನ್ಸ್ ಮಾಡಲು ಒತ್ತಾಯಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣಾಗಿದೆ.

Leave A Reply

Your email address will not be published.