Mangaluru: ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಅರೆಸ್ಟ್‌!!!

Share the Article

Mangaluru: ಮದುವೆಯಾಗುವುದಾಗಿ ನಂಬಿಸಿ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದ ಆರೋಪಿಯೋರ್ವನನ್ನು ಉಳ್ಳಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್‌ ರಝೀನ್‌ ಎಂಬಾತನೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ.

ಚಿಕ್ಕಮಗಳೂರಿನ (Chikkamagaluru) ಮೂಡಿಗೆರೆ ನಿವಾಸಿಯಾಗಿರುವ ಪರಿಶಿಷ್ಟ ಜಾತಿಗೆ ಸೇರಿದ 17 ವರ್ಷದ ಬಾಲಕಿಯ ಜೊತೆ ಆರೋಪಿ ಪ್ರೀತಿಯ ನಾಟಕವಾಡಿದ್ದಾನೆ. ನಂತರ ಬಾಲಕಿಯನ್ನು ಕುಂಪಲ ಗ್ರಾಮಕ್ಕೆ ಕರೆಸಿಕೊಂಡಿದ್ದಾನೆ.

ಇದನ್ನು ಓದಿ: Kukke Subrahmanya: ಕುಕ್ಕೇ ದೇಗುಲಕ್ಕೆ ಆಗಮಿಸಿದ್ದ ಭಕ್ತರ ಪರ್ಸ್ ಕಳ್ಳತನ!! ಸಮಯಪ್ರಜ್ಞೆ ಮೆರೆದ ಭದ್ರತಾ ಸಿಬ್ಬಂದಿ ಗಂಗಾಧರ -ಮಹಿಳೆ ಪೊಲೀಸರ ವಶಕ್ಕೆ

ಅಲ್ಲಿನ ಬಾಡಿಗೆ ಮನೆಯೊಂದರಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಇದೀಗ ಆರೋಪಿ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave A Reply