Sullia: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವು!!!

Sullia: ನದಿಯಲ್ಲಿ ಸ್ನಾನಕ್ಕೆಂದು ಹೋದ ಯುವಕನೋರ್ವ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.

 

ಕಾಸರಗೋಡು ವರ್ಕಾಡಿ, ಧರ್ಮನಗರದ ಸಮೀರ್‌ (26) ಮೃತ ಯುವಕ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: 9ನೇ ತರಗತಿಯ ವಿದ್ಯಾರ್ಥಿಯನ್ನು ಹೊಡೆಯಲು ಮಾರಕಾಸ್ತ್ರ ಸಮೇತ ಬಂದ 7 ನೇ ತರಗತಿ ವಿದ್ಯಾರ್ಥಿ; ಬೆಚ್ಚಿಬಿದ್ದ ಜನತೆ!!

ಇವರು ವಿಶನ್‌ ಆಪ್ಟಿಕಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಸುಳ್ಯದಲ್ಲಿ ರೂಮ್‌ ಮಾಡಿಕೊಂಡಿದ್ದರು. ಡಿ.31 ರಂದು ರಜೆ ಇದ್ದ ಕಾರಣ ಬಟ್ಟೆ ತೊಳೆಯಲು ಮತ್ತು ಸ್ನಾನಕ್ಕೆಂದು ಇತರ ಇಬ್ಬರು ಯುವಕರ ಜೊತೆ ನದಿಗೆ ಬಂದಿದ್ದಾರೆ. ಈ ಸಂದರ್ಭ ಸಮೀರ್‌ ನೀರಿನಲ್ಲಿ ಮುಳುಗಿದ್ದಾರೆ. ಕೂಡಲೇ ಅಗ್ನಿಶಾಮಕ ದಳ, ಮುಳುಗು ತಜ್ಞರು ಶೋಧ ನಡೆಸಿ ಮೃತದೇಹವನ್ನು ಪತ್ತೆ ಹಚ್ಚಿ ಹೊರಗೆ ತೆಗೆದಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.