Jharkhand Crime: ಫೋನ್‌ನಲ್ಲಿ ಮಾತಾಡುವಾಗ ಅತ್ತ ಮಗು, ಕತ್ತು ಹಿಸುಕಿ ಕೊಂದ ಕ್ರೂರಿ ತಾಯಿ!!

Jharkhand News: ತಾಯಿಯೊಬ್ಬಳು ತಾನು ಫೋನಿನಲ್ಲಿ ಮಾತನಾಡುವಾಗ ಮಗು ಅಳುತ್ತಿದೆ ಎಂಬ ಕಾರಣಕ್ಕೆ ಕತ್ತು ಹಿಸುಕಿ ಕೊಂದ ಘಟನೆಯೊಂದು ಜಾರ್ಖಂಡ್‌ನ ಗಿರಿಡಿ ಜಿಲ್ಲೆಯಲ್ಲಿ ನಡೆದಿದೆ.

 

ಅಫ್ಸಾನಾ ಖಾತೂನ್‌ ಎಂಬ ಕ್ರೂರಿ ತಾಯಿಯೇ ಮಗುವನ್ನು ಕೊಂದಾಕೆ. ಈ ಮಹಿಳೆ ಆರು ವರ್ಷಗಳ ಹಿಂದೆ ನಿಜಾಮುದ್ದೀನ್‌ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಗಂಡು ಮಕ್ಕಳಿದ್ದರು.

ಡಿ.28 ರಂದು ಈ ಮಹಿಳೆ ತನ್ನ ಪತಿಯೊಂದಿಗೆ ಜಗಳ ಮಾಡಿದ್ದಳು. ಹಾಗಾಗಿ ಸಿಟ್ಟುಗೊಂಡ ಈಕೆ ತನ್ನ ಎರಡು ವರ್ಷದ ಮಗನೊಂದಿಗೆ ಕೋಣೆಯ ಕೊಠಡಿಯನ್ನು ಲಾಕ್‌ ಮಾಡಿ ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಆದರೆ ಈ ಸಂದರ್ಭದಲ್ಲಿ ಮಗು ಬಿಟ್ಟು ಬಿಡದೆ ಅಳುತ್ತಿತ್ತು. ಆದರೆ ಈಕೆ ಪಾಪಿ ತಾಯಿ ಮಗುವನ್ನು ಸಮಾಧಾನ ಮಾಡುವ ಬದಲು ಫೋನ್‌ನಲ್ಲಿ ಮಾತನಾಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಕತ್ತು ಹಿಸುಕಿ ಕೊಂದೇ ಬಿಟ್ಟಿದ್ದಾಳೆ. ಈ ಕುರಿತು ದೂರಿನಲ್ಲಿ ಅಫ್ಸಾನಾ ಅವರ ಮಾವ ರೋಜನ್‌ ಅನ್ಸಾರಿ ದೂರಿನಲ್ಲಿ ಹೇಳಿದ್ದಾರೆ.

ಪತಿಯೊಂದಿಗೆ ಗಲಾಟೆ ಮಾಡಿ ತುಂಬಾ ಸಮಯದವರೆಗೆ ಬಾಗಿಲು ತೆರೆಯದೇ ಇದ್ದುದನ್ನು ಕಂಡು ಪತಿ ಮಲಗಲು ಕೋಣೆಗೆ ಹೋಗಿದ್ದಾರೆ. ಆ ವೇಳೆ ಮಗುವನ್ನು ಮುಟ್ಟಿ ನೋಡಿದ್ದಾರೆ. ಆದರೆ ಮಗು ಪ್ರಜ್ಞೆ ತಪ್ಪಿದ್ದನ್ನು ಕಂಡು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಡಾಕ್ಟರ್ಸ್‌ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಅನಂತರ ಪೊಲೀಸರು ತಾಯಿ ಅಫ್ಸಾನಳನ್ನು ಬಂಧಿಸಿದ್ದಾರೆ. ಈ ವೇಳೆ ಆಕೆ ತಾನು ಮಗುವನ್ನು ಕೊಲ್ಲುವ ಉದ್ದೇಶವಿರಲಿಲ್ಲ. ನನಗೆ ಕೋಪ ಬಂದು ನಾನು ಮಗುವನ್ನು ತಳ್ಳಿದೆ. ಈ ವೇಳೆ ಮಗು ಬೆಡ್‌ನಿಂದ ಕೆಳಗೆ ಬಿದ್ದಿದೆ ಎಂಬ ಹೇಳಿಕೆಯನ್ನು ನೀಡಿದ್ದಾಳೆ ಎಂದು ವರದಿಯಾಗಿದೆ.

Leave A Reply

Your email address will not be published.